‘ಸುಧಾ’ರಿಸಿಕೊಳ್ಳಿ, ಇಲ್ದಿದ್ರೆ ರಕ್ತಕ್ರಾಂತಿಯಾಗುತ್ತೆ! ಸರ್ಕಾರಕ್ಕೆ ರೆಡ್ಡಿ ಎಚ್ಚರಿಕೆ
ಒಂದು ಕಡೆ ಅನರ್ಹ ಶಾಸಕರನ್ನು ಓಲೈಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಹೊಸ ಜಿಲ್ಲೆ-ತಾಲೂಕುಗಳ ರಚನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ ಸರ್ಕಾರದ ಇಂತಹ ನಿರ್ಧಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಅನರ್ಹ ಶಾಸಕ ಆನಂದ್ ಸಿಂಗ್ ಒತ್ತಾಯದ ಮೇರೆಗೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಲು ಒಲವು ತೋರಿಸಿತ್ತು. ಆದರೆ ಸ್ವಪಕ್ಷಿಯರಿಂದಲೇ ಅಪಸ್ವರ ಕೇಳಿಬಂದಿತ್ತು.
ಬೆಂಗಳೂರು (ನ.05): ಒಂದು ಕಡೆ ಅನರ್ಹ ಶಾಸಕರನ್ನು ಓಲೈಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಹೊಸ ಜಿಲ್ಲೆ-ತಾಲೂಕುಗಳ ರಚನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ ಸರ್ಕಾರದ ಇಂತಹ ನಿರ್ಧಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯನ್ನು ಹೊಸ ತಾಲೂಕು ಮಾಡಲು ಸರ್ಕಾರ ನಿರ್ಧರಿಸಿದ್ದು, ಗ್ರಾಮಗಳ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದೆ. ಸರ್ಕಾರ ಮಾತು ಕೇಳದಿದ್ದರೆ ಗೌರಿ ಬಿದನೂರಿನಲ್ಲಿ ರಕ್ತಕ್ರಾಂತಿಯಾಗುತ್ತೆ ಎಂದು ಮಾಜಿ ಸಚಿವರು ಎಚ್ಚರಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಅನರ್ಹ ಶಾಸಕ ಆನಂದ್ ಸಿಂಗ್ ಒತ್ತಾಯದ ಮೇರೆಗೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಲು ಒಲವು ತೋರಿಸಿತ್ತು. ಆದರೆ ಸ್ವಪಕ್ಷಿಯರಿಂದಲೇ ಅಪಸ್ವರ ಕೇಳಿಬಂದಿತ್ತು.