ಉದ್ಯಮಿ ಮನೆಯಲ್ಲಿ ಶರದ್-ಅಜಿತ್ ಪವಾರ್ ಸಭೆ: ಈ ಭೇಟಿ ಹಿಂದಿನ ರಹಸ್ಯವೇನು..?

ಮಹಾರಾಷ್ಟ್ರ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆ
ಈಗ ಶರದ್ ಪವಾರ್-ಅಜಿತ್ ಪವಾರ್ ಸೀಕ್ರೆಟ್ ಮೀಟ್
ಉದ್ಯಮಿ ಮನೆಯಲ್ಲಿ ಭೇಟಿಯಾದ ಉಭಯ ನಾಯಕರು

Share this Video
  • FB
  • Linkdin
  • Whatsapp

ಪುಣೆ: ಅಂದು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶರದ್ ಪವಾರ್(Sharad Pawar), ಈಗ ಪಕ್ಷ ತೊರೆದು ಹೋದ ಅಜಿತ್ ಪವಾರ್(Ajit Pawar) ಜೊತೆ ಸೀಕ್ರೆಟ್ ಸಭೆ ನಡೆಸಿದ್ದಾರೆ. ಶನಿವಾರ ಪುಣೆಯಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಮಹಾರಾಷ್ಟ್ರ(maharashta) ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ. ಶರದ್ ಪವಾರ್ ಬಣದ ಜಯಂತ್ ಪಾಟೀಲ್ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಎನ್‌ಸಿಪಿ ತೊರೆದು ಸರ್ಕಾರಕ್ಕೆ ಬೆಂಬಲಿಸಿ ಡಿಸಿಎಂ ಪಟ್ಟಕ್ಕೆ ಅಜಿತ್‌ ಪವಾರ್‌ ಏರಿದ್ದರು. ಅಜಿತ್ ಪವಾರ್ ಜೊತೆ ಹೋಗಿದ್ದ 8 ಶಾಸಕರು ಸಚಿವರಾಗಿದ್ದಾರೆ. ಭಾರೀ ಬೆಳವಣಿಗೆ ನಡುವೆಯೂ ಅಜಿತ್-ಶರದ್ ಪವಾರ್ ಭೇಟಿ ಮಾಡಿದ್ದಾರೆ. ಇಬ್ಬರ ಭೇಟಿಯಿಂದ ‘ಇಂಡಿಯಾ’ ಮಿತ್ರ ಕೂಟದಲ್ಲೂ ಇದೀಗ ಸಂಚಲನ ಮೂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಹಾವೇರಿಯಿಂದ ಪುತ್ರನನ್ನು ಕಣಕ್ಕಿಳಿಸಲು ಈಶ್ವರಪ್ಪ ಪ್ರಯತ್ನ: ಟೆಂಪಲ್‌ ರನ್‌ ಆರಂಭ !

Related Video