ಹಾವೇರಿಯಿಂದ ಪುತ್ರನನ್ನು ಕಣಕ್ಕಿಳಿಸಲು ಈಶ್ವರಪ್ಪ ಪ್ರಯತ್ನ: ಟೆಂಪಲ್ ರನ್ ಆರಂಭ !
ಇತ್ತ ಸಚಿವರೇ ಸ್ಪರ್ಧೆ ಮಾಡಲಿ ಎನ್ನುತ್ತಿರುವ ಕಾಂಗ್ರೆಸ್ ಹೈಕಮಾಂಡ್
ಕುಟುಂಬಕ್ಕೆ ಟಿಕೆಟ್ ಬೇಡಿಕೆ ಇಡುತ್ತಿರುವ ಕಾಂಗ್ರೆಸ್‌ನ ಹಾಲಿ ಸಚಿವರು
ಪುತ್ರ, ಪುತ್ರಿ, ಪತ್ನಿ, ಸಂಬಂಧಿಕರಿಗೆ ಟಿಕೆಟ್ ನೀಡುವಂತೆ ದುಂಬಾಲು
ಹಾವೇರಿ: ಲೋಕಸಭೆ ಅಖಾಡಕ್ಕಿಳಿಯಲು ಟಿಕೆಟ್‌ಗಾಗಿ(Ticket) ಕಸರತ್ತು ಆರಂಭವಾಗಿದೆ. ಲೋಕ ಚುನಾವಣೆಯಲ್ಲಿ(Loksabha) ಕುಟುಂಬಕ್ಕೆ ಟಿಕೆಟ್ ಕೊಡಿಸಲು ನಾಯಕರು ಸರ್ಕಸ್ ನಡೆಸುತ್ತಿದ್ದಾರೆ. ಹಾವೇರಿ(haveri) ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಲು ಈಶ್ವರಪ್ಪ(Eshwarappa) ಪ್ರಯತ್ನಿಸುತ್ತಿದ್ದಾರೆ. ಇನ್ನೂ ಶಿವಕುಮಾರ್ ಉದಾಸಿ ಸ್ಪರ್ಧೆ ಮಾಡಲ್ಲ ಎಂದ ಬೆನ್ನಲ್ಲೇ ಈಶ್ವರಪ್ಪ ಆ್ಯಕ್ಟೀವ್ ಆಗಿದ್ದಾರೆ. ಹಾವೇರಿಯ ವಿವಿಧೆಡೆ ಮಾಜಿ ಸಚಿವ ಈಶ್ವರಪ್ಪ ಈಗಾಗಲೇ ಟೆಂಪಲ್ ರನ್ ಮಾಡುತ್ತಿದ್ದಾರೆ. ಹಾಲಿ ಸಂಸದರು ಸ್ಪರ್ಧೆ ಮಾಡಲ್ಲ ಎಂದಿದ್ದರಿಂದ ಕಾಂತೇಶ ಸ್ಪರ್ಧೆ ಸೂಕ್ತ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಅನೇಕ ನಾಯಕರು ಕೂಡಾ ಇದನ್ನೇ ಹೇಳಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಅಲ್ಲದೇ ಎಲ್ಲರ ಅಪೇಕ್ಷೆ ಇದೆ ಆಗಿದೆ, ಎಲ್ಲಾ ಮಠಾಧೀಶರ ಆಶೀರ್ವಾದ ಇದೆ ಎಂದು ಅವರು ಹೇಳಿದರು.ಇತ್ತ ಕಾಂಗ್ರೆಸ್‌ನ ಹಾಲಿ ಸಚಿವರು ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಬೇಡಿಕೆಯನ್ನು ಇಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಬೆಳಗಾವಿಯಲ್ಲಿ ಮೂಲ VS ವಲಸಿಗ ಕಿತ್ತಾಟ: ಲೋಕಸಭಾ ಟಿಕೆಟ್ ಆಕಾಂಕ್ಷಿಗಳ್ಯಾರು..?