ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆರೋಪ: ಈ ಹೇಳಿಕೆ ಅಸಲಿ ಸತ್ಯವೇನು ?

ಶಾಮನೂರು ಶಿವಶಂಕರಪ್ಪ ಜೊತೆ 25ರಿಂದ 30 ಅಧಿಕಾರಿಗಳು ಮಾತನಾಡಿದ್ದಾರೆ. ಬಳಿಕ ಸರ್ಕಾರದ ಅಸಮತೋಲನದ ಬಗ್ಗೆ ಅವರು ಗರಂ ಆಗಿದ್ದಾರೆ.
 

First Published Oct 3, 2023, 11:56 AM IST | Last Updated Oct 3, 2023, 12:00 PM IST

ಕಾಂಗ್ರೆಸ್‌ ಸರ್ಕಾರದಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ(Shamanur Shivashankarappa) ಆರೋಪ ಮಾಡಿದ್ದಾರೆ. ಆದ್ರೆ ಈ ಹೇಳಿಕೆ ಹಿಂದಿನ ಅಸಲಿ ಸತ್ಯವೇನು ಎಂಬುದು ಇನ್ನೂ ತಿಳಿದಿಲ್ಲ. ಅಲ್ಲದೇ ಉದ್ದೇಶ ಪೂರ್ವಕವಾಗಿ ಲಿಂಗಾಯತ ಅಧಿಕಾರಿಗಳಿಗೆ ತೊಂದರೆ ಕೊಡಲಾಗ್ತಿದೆ ಎಂದು ಆರೋಪಿಸಲಾಗಿದೆ. ಶಿವಶಂಕರಪ್ಪ ಮಧ್ಯಪ್ರವೇಶದ ಬಳಿಕ 2/3 ವರ್ಗಾವಣೆಗಳು ಕೂಡ ರದ್ದಾಗಿವೆ. ಲಿಂಗಾಯತರು (Lingayats) ಮಾತ್ರವಲ್ಲ, ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಜಾತಿ, ಧರ್ಮಕ್ಕೂ ಅನ್ಯಾಯವಾಗಲ್ಲ. ನನ್ನ ಸಚಿವ ಸಂಪುಟದಲ್ಲಿ ಏಳು ಮಂದಿ ಲಿಂಗಾಯತ ಸಚಿವರಿದ್ದಾರೆ. ಹೀಗಿರುವಾಗ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಹೇಗೆ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.ಇನ್ನೂ ಶಾಮನೂರು ಅವರ ಜೊತೆ 25 ರಿಂದ 30 ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  95 ವರ್ಷ ಹಳೆಯ ಶಾಲೆಯಲ್ಲೇ ಪಾಠ, ಪ್ರವಚನ: ಬಿರುಕು ಬಿಟ್ಟ ಸೂರು, ಕುಸಿಯುತ್ತಿರುವ ಗೋಡೆ..!