
ಕೊಟ್ಟ ಮಾತನ್ನು ಉಳಿಸಿಕೊಂಡ ಜೋಡೆತ್ತು ಸರ್ಕಾರ..!: ಸ್ತ್ರೀ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್..!
ಫ್ರೀ ಬಸ್‌ನಲ್ಲಿ ಓಡಾಡೋಕೆ ಕಂಡೀಷನ್ ಅಪ್ಲೈ..!
ಸರ್ಕಾರಿ ಬಸ್‌ನಲ್ಲಿ ಟಿಕೆಟ್.. ಟಿಕೆಟ್ ಎಂದ ಮಂತ್ರಿಗಳು ..!
ಫ್ರೀ ಬಸ್‌ನಲ್ಲಿ ಓಡಾಡಲು ಬೇಕು ಶಕ್ತಿ ಸ್ಮಾರ್ಟ್ ಕಾರ್ಡ್..!
ಗೌರ್ಮೆಂಟ್ ಬಸ್‌ನಲ್ಲಿ ಫ್ರೀ ಆಗಿ ಓಡಾಡೋ ಟೈಮ್ ಕೊನೆಗೂ ಬಂದೇ ಬಿಡ್ತು. ಇಷ್ಟು ದಿನ 5 ಗ್ಯಾರಂಟಿ ಯೋಜನೆಗಳಲ್ಲಿ, ಒಂದಾದ್ರೂ ಜಾರಿ ಆದರೆ ಸಾಕು ಅಂತಿದ್ದವರಿಗೆ, ಈಗ ಉತ್ತರ ಸಿಕ್ಕಾಗಿದೆ. ಈ ಶಕ್ತಿಯೋಜನೆ ಜಾರಿ ಆದ ಮೇಲೆ ಸಹಜವಾಗಿ ಪ್ರಯಾಣಿಕರಿಗೆ ಗೊಂದಲ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಸಾರಿಗೆ ಇಲಾಖೆ ಕೆಲ ವಿಶೇಶ ತಯಾರಿಗಳನ್ನ ಮಾಡಿಕೊಂಡಿದೆ. ಉಚಿತ ಪ್ರಯಾಣ ಅನ್ನೊ ಜೋಷ್‌ನಲ್ಲಿ ಮಹಿಳಾಮಣಿಗಳು ಸರ್ಕಾರಿ ಬಸ್‌ಗಳತ್ತ ದೌಡಾಯಿಸಿಕೊಂಡು ಬರ್ತಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ 5 ಗ್ಯಾರಂಟಿಯನ್ನ ಜನರ ಮುಂದೆ ಇಟ್ಟಿತ್ತು. ಅದರಲ್ಲಿ ನಂಬರ್ 1 ಗ್ಯಾರಂಟಿ ಯೋಜನೆ, ಜಾರಿಯಾಗಿದ್ದಾಗಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Today Horoscope: ಈ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.. ಇಂದು ದುರ್ಗಾ ದೇವಿ ಆರಾಧನೆ ಮಾಡಿ