Today Horoscope: ಈ ದಿನ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.. ಇಂದು ದುರ್ಗಾ ದೇವಿ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಸೋಮವಾರ, ನವಮಿ ತಿಥಿ, ಉತ್ತರಾಭಾದ್ರ ನಕ್ಷತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ನವಮಿ ಸೇರ್ಪಡೆಯಾದ್ರೆ, ಇಂದು ದುರ್ಗಾ ಆರಾಧನೆಗೆ ತುಂಬಾ ಶ್ರೇಷ್ಠವಾದ ದಿನವಾಗಿದೆ. ಹೀಗಾಗಿ ಈ ದಿನ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕುಂಕುಮಾರ್ಚನೆ ಮಾಡಬಹುದು. ಇಲ್ಲವೇ ಒಂದು ತಟ್ಟೆಯಲ್ಲಿ ವಿಳ್ಳೆದೆಲೆ ಇಟ್ಟು ತಾಯಿಗೆ ಕುಂಕುಮ ಅರ್ಚನೆಯನ್ನು ಮಾಡಬಹುದಾಗಿದೆ. ಈ ಕುಂಕುಮವನ್ನು ಪ್ರತಿದಿನ ಹಣೆಗೆ ಇಟ್ಟುಕೊಳ್ಳಿ. ಅಮ್ಮನವರ ಪ್ರಾರ್ಥನೆಯನ್ನು ತುಂಬಾ ಶ್ರದ್ಧೆಯಿಂದ ಮಾಡಿ. ಇದರಿಂದ ನಿಮಗೆ ಒಳಿತಾಗಲಿದೆ. 

ಇದನ್ನೂ ವೀಕ್ಷಿಸಿ: 15 ವರ್ಷದ ಬಳಿಕ ಒಟ್ಟಿಗೆ ಬರ್ತಿದ್ದಾರೆ ಸುಷ್ಮಾ-ಸೃಜನ್: 'ಭಾಗ್ಯಲಕ್ಷ್ಮೀ' ಬಗ್ಗೆ ಟಾಕಿಂಗ್ ಸ್ಟಾರ್ ಹೇಳಿದ್ದೇನು?

Related Video