CD ರಿಲೀಸ್ ಹಿಂದೆ ಯಾರ ಕೈವಾಡ? ಅಜ್ಞಾತ ಸ್ಥಳದಲ್ಲಿ ಜಾರಕಿಹೊಳಿ ಬ್ರದರ್ಸ್‌ ಚರ್ಚೆ...!

ರಾಸಲೀಲೆ ಸಿಡಿ ರಿಲೀಸ್ ಈ ಬೆಳವಣಿಗೆಯಿಂದ ಕಂಗೆಟ್ಟಿರುವ ರಮೇಶ್​ ಜಾರಕಿಹೊಳಿ, ಅಣ್ಣ ಬಾಲಚಂದ್ರ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.03): ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ರಮೇಶ್​ ಜಾರಕಿಹೊಳಿ. ಆದರೆ, ಈಗ ಅವರ ಅಶ್ಲೀಲ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಹೆಗಲಿಗೆ..?

ಇದರ ಜತೆಗೆ ನೀರಾವರಿ ಸಚಿವ ಸ್ಥಾನ ಪಟ್ಟ ಪಡೆದ ಒಂದೇ ವರ್ಷಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡುವಂತಾಗಿದೆ. ಬಿಜೆಪಿ ಸರ್ಕಾರಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದ ಕಂಗೆಟ್ಟಿರುವ ರಮೇಶ್​ ಜಾರಕಿಹೊಳಿ, ಅಣ್ಣ ಬಾಲಚಂದ್ರ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ.

ರಾಸಲೀಲೆ ಸಿ.ಡಿ.: ರಾಜೀನಾಮೆ ಪತ್ರದಲ್ಲಿ ಮಹತ್ವದ ಅಂಶ ಉಲ್ಲೇಖಿಸಿದ ಜಾರಕಿಹೊಳಿ

ಕೆಎಂಎಫ್​ ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ರಮೇಶ್ ಜಾರಕಿಹೊಳಿ ಇಂದು (ಬುಧವಾರ) ಅಜ್ಞಾತ ಸ್ಥಳದಲ್ಲಿ ಭೇಟಿ ಮಾಡಿದ್ದು, ಮುಂದಿನ ನಡೆ ಕುರಿತು ಚರ್ಚೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Video