Asianet Suvarna News Asianet Suvarna News

ಡಿಕೆಶಿ ವಿರುದ್ಧ 'ಸಿಡಿ'ದ ಸಾಹುಕಾರ್: ಸೋಮವಾರ ಆಡಿಯೋ ಬಿಡುಗಡೆ?

ಬೆಳಗಾವಿ ಸಾಹುಕಾರ್‌ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ವಿರುದ್ಧ ಸಮರ ಸಾರಿದ್ದು, ಸೋಮವಾರ ಡಿಕೆಶಿ ವಿರುದ್ಧ ಸಿಡಿಯುತ್ತಾ ಬಾಂಬ್‌ ಎಂಬ ಪ್ರಶ್ನೆ ಎದುರಾಗಿದೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಕೇಸ್‌ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಕುರಿತು ಡಿಕೆಶಿ ವಿರುದ್ಧ ಅವರು ಕಿಡಿ ಕಾರಿದ್ದಾರೆ. ತಮ್ಮ ವಿರುದ್ಧದ ಸಿಡಿ ಷಡ್ಯಂತ್ರದಲ್ಲಿ ಡಿಕೆಶಿ ಕೈವಾಡದ ಬಗ್ಗೆ ಸಾಕ್ಷ್ಯವಿದೆ. ಸಿಡಿ ಷಡ್ಯಂತ್ರ್ಯಕ್ಕಾಗಿ 40 ಕೋಟಿ ಖರ್ಚು ಮಾಡಿದ್ದಾರೆ ಎಂದು ಜಾರಕಿಹೊಳಿ ಹೇಳಿದ್ದರು.‌ ಇದೀಗ ಆಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಲು ಅವರು ಮುಂದಾಗಿದ್ದು, ಸೋಮವಾರ ಆಡಿಯೋ ಬಿಡುಗಡೆ ಮಾಡಲು ಜಾರಕಿಹೊಳಿ ನಿರ್ಧರಿಸಿದ್ದಾರೆ.