ಹಣಕ್ಕಾಗಿ ಮಾರಿಕೊಂಡವರಿಗೆ ವೋಟ್ ಹಾಕಲ್ಲ: ದೇಗುಲದಲ್ಲಿ ಕೋಲಾರ ಮತದಾರರ ಪ್ರಮಾಣ
ಕೋಲಾರದಲ್ಲಿ ಆಣೆ ಹಾಗೂ ಪ್ರಮಾಣದ ಪಾಲಿಟಿಕ್ಸ್ ಜೋರಾಗಿದ್ದು, ಮುನಿರತ್ನ ಆಣೆ ಆಟಕ್ಕೆ ಕೋಲಾರ ಮತದಾರರು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, ಮತಬೇಟೆಗೆ ರಾಜಕೀಯ ನಾಯಕರಿಂದ ನಾನಾ ಕಸರತ್ತುಗಳು ನಡೆದಿವೆ. ಈ ನಡುವೆ ಪಕ್ಷಾಂತರಿಗಳು, ಹಣಕ್ಕಾಗಿ ಮಾರಿಕೊಂಡವರಿಗೆ ವೋಟ್ ಹಾಕಲ್ಲ ಎಂದು ಕೋಲಾರ ಮತದಾರರು ಶಪಥ ಮಾಡಿದ್ದಾರೆ. ಈ ಮೂಲಕ ಮುನಿರತ್ನ ಆಣೆ ಆಟಕ್ಕೆ ಕೋಲಾರ ಮತದಾರರು ತಿರುಗೇಟು ನೀಡಿದ್ದಾರೆ. ರೈತರ ಮೇಲೆ ಗೋಲಿಬಾರ್, ಲಾಠಿಚಾರ್ಜ್ ಮಾಡಿದ ಪಕ್ಷಗಳಿಗೆ ಮತವಿಲ್ಲ. ಕೊರೊನಾ ಕಾಲದಲ್ಲಿ ಸ್ಪಂದಿಸಿದ ಸ್ಥಳೀಯ ನಾಯಕರಿಗೆ ಮಾತ್ರ ಮತ. ಬೇರೆಡೆಯಿಂದ ವಲಸೆ ಬರುವ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ. ಜಿಲ್ಲೆಯ ಅಭಿವೃದ್ಧಿ ಮಾಡದವರಿಗೆ ಮತ ಹಾಕಲ್ಲ ಎಂದು ಕೋಲಾರ ಮತದಾರರು ದೇಗುಲದಲ್ಲಿ ಪ್ರಮಾಣ ಮಾಡಿದ್ದಾರೆ.