Asianet Suvarna News Asianet Suvarna News

ಕೈ ಅಧಿನಾಯಕನ ಮುಂದಿನ ಕುರುಕ್ಷೇತ್ರ ಕರ್ನಾಟಕನಾ..? ಕಾಂಗ್ರೆಸ್‌ನ ಗಾಂಧಿ ಕುಟುಂಬದ ಕುಡಿಗೆ ಕರುನಾಡು ಎಷ್ಟು ಸೇಫ್..?

ವಯನಾಡಿನಲ್ಲಿ ವಿರೋಧ..ಅಮೇಥಿಯಲ್ಲಿ ಅತಂತ್ರ..!
ರಾಹುಲ್ ಗಾಂಧಿ ಮುಂದಿನ ಕುರುಕ್ಷೇತ್ರಕ ರ್ನಾಟಕನಾ..?
ಗಾಂಧಿ ಕುಟುಂಬದ ಕುಡಿಗೆ ಕರುನಾಡು ಎಷ್ಟು ಸೇಫ್..?

ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ. ದೇಶದ ಚರಿತ್ರೆಯ ಪುಟಗಳಲ್ಲಿ ಅಜ್ಜಿಯದ್ದು ಅಳಿಸಲಾಗದ ಹೆಸರು. ತಂದೆಯೂ ಪ್ರಭಾವಿ, ತಾಯಿಯೂ ಪ್ರಭಾವಿ. ಆದ್ರೆ ಮಗನ ವಿಚಾರಕ್ಕೆ ಬಂದ್ರೆ, ಬೇರೆಯೇ ಕಥೆ. ದೇಶದ ರಾಜಕಾರಣದಲ್ಲಿ ಬಿಗಿ ಹಿಡಿತ ಹೊಂದಿದ್ದ ಕುಟುಂಬವೊಂದರ ಕುಡಿಯೀಗ ಚುನಾವಣೆ ಗೆಲ್ಲೋದಕ್ಕೆ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಕೇರಳದ ವಯನಾಡ್ ಕ್ಷೇತ್ರದ ಸಂಸದ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ವಂತ ಕ್ಷೇತ್ರ ಅಮೇಥಿ ಕೈಕೊಟ್ಟಾಗ ರಾಹುಲ್ ಗಾಂಧಿಯವರನ್ನು ಗೆಲ್ಲಿಸಿದ್ದು ವಯನಾಡ್.ಕಾಂಗ್ರೆಸ್ (Congress) ಪಾಲಿಗೆ ಕರ್ನಾಟಕ ಅದೃಷ್ಟದ ನೆಲ. ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದಾಗ್ಲೆಲ್ಲಾ ಪಕ್ಷಕ್ಕೆ ಪುನರ್ಜನ್ಮ ಕೊಟ್ಟಿರೋದು ಕರ್ನಾಟಕನೇ(Karnataka). ಕಳೆದ ವಿಧಾನಸಭಾ ಚುನಾವಣೆಗೂ ಮುಂಚೆ ದೊಡ್ಡ ರಾಜ್ಯಗಳನ್ನೆಲ್ಲಾ ಕಳೆದುಕೊಂಡು ಕಂಗಾಲಾಗಿದ್ದ ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಿದ್ದೇ ಕರ್ನಾಟಕದ ಗೆಲುವು. ಕಾಂಗ್ರೆಸ್‌ಗಷ್ಟೇ ಅಲ್ಲ, ಕಾಂಗ್ರೆಸ್‌ನ ಮೂಲ ಬೇರು ಗಾಂಧಿ ಕುಟುಂಬಕ್ಕೂ ಕರ್ನಾಟಕ ಅದೃಷ್ಟದ ನೆಲ. ಗಾಂಧಿ ಪರಿವಾರದ ಸದಸ್ಯರು ರಾಜಕೀಯ ಸಂಕಷ್ಟ ಎದುರಿಸಿದಾಗ್ಲೆಲ್ಲಾ ಕೈ ಹಿಡಿದು ಮೇಲೆತ್ತಿದ ಹಿರಿಮೆ ಕರ್ನಾಟಕಕ್ಕಿದೆ. ಇಂಥಾ ನೆಲದಿಂದಲೇ ರಾಹುಲ್ ಗಾಂಧಿ ಮುಂದಿನ ಲೋಕಸಭಾ ಚುನಾವಣೆಗೆ(Lok Sabha) ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಇಂಥದ್ದೊಂದು ಸುದ್ದಿ ಸಂಚಲನ ಸೃಷ್ಠಿಸಲು ಕಾರಣವಾಗಿರೋದು ವಯನಾಡ್'ನಿಂದ ನುಗ್ಗಿ ಬಂದಿರೋ ಅದೊಂದು ವಾರ್ನಿಂಗ್. ಕೇರಳದ ವಯನಾಡ್(Wayanad) ಲೋಕಸಭಾ ಕ್ಷೇತ್ರ ರಾಹುಲ್ ಗಾಂಧಿಯವರಿಗೆ ರಾಜಕೀಯ ಮರುಜನ್ಮ ಕೊಟ್ಟ ನೆಲ. 2019ರಲ್ಲಿ ವಯನಾಡ್ ಏನಾದ್ರೂ ಕೈ ಕೊಟ್ಟಿದ್ದಿದ್ರೆ, ರಾಹುಲ್ ಗಾಂಧಿ ರಾಜಕೀಯ ಸನ್ಯಾಸ ತೆಗೆದುಕೊಳ್ಬೇಕಿತ್ತೇನೋ.. ಆದ್ರೆ ಅಮೇಥಿ ಕೈಕೊಟ್ರೂ ವಯನಾಡ್ ಕೈ ಬಿಡ್ಲಿಲ್ಲ. ವಯನಾಡ್'ನಿಂದ ಗೆದ್ದು 4ನೇ ಬಾರಿ ಸಂಸದರಾದ ರಾಹುಲ್ ಗಾಂಧಿ, ಲೋಕಸಭೆ ಪ್ರವೇಶಿಸಿದ್ರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದ್ರು. 

ಇದನ್ನೂ ವೀಕ್ಷಿಸಿ:  ಹೊರಗೆ ಆಲೆಮನೆ..ಒಳಗೆ ಭ್ರೂಣ ಪತ್ತೆ ದಂಧೆ: ಸಕ್ಕರೆ,ಬೆಲ್ಲ ತಯಾರಿಸೋ ಸ್ಥಳದಲ್ಲಿ ಪತ್ತೆಯಾಗ್ತಿತ್ತು ಭ್ರೂಣ..!

Video Top Stories