
ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಖರ್ಗೆ, ರಾಹುಲ್ ಸಭೆ: ಅಭ್ಯರ್ಥಿಗಳೊಂದಿಗೆ ವರ್ಚುವಲ್ ಮೀಟಿಂಗ್
ಈ ಬಾರಿ ನಮ್ಮದೇ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಹುನಿರೀಕ್ಷಿತ ಮತದಾನೋತ್ತರ ಸಮೀಕ್ಷೆ ಬಹಿರಂಗವಾಗಿದ್ದು, ಪ್ರಧಾನಿ ಮೋದಿಗೆ(Narendra Modi) ಹ್ಯಾಟ್ರಿಕ್ ಗೆಲುವು ಪಕ್ಕ ಎಂದು ಸಮೀಕ್ಷೆಗಳು ಹೇಳುತ್ತಿವೆ. ಎನ್‌ಡಿಎಗೆ(NDA) ಬಹುಮತ ಪಕ್ಕಾ ಎಂದಿದ್ದು, ಇದು ಬಿಜೆಪಿ(BJP) ಮತ್ತು ಎನ್‌ಡಿಎ ಪಾಳಯದಲ್ಲಿ ಸಂಭ್ರಮವನ್ನು ತಂದು ಕೊಟ್ಟಿದೆ. ಆದ್ರೆ ಐಎನ್‌ಡಿಐಎ ಈ ಚುನಾವಣೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದೆ. ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ ಎಂದು ಕಾಂಗ್ರೆಸ್(Congress) ಹೇಳಿದೆ. ಸರ್ವೆ ನೋಡಿ ಐಎನ್‌ಡಿಐಎ ಕಂಗಾಲಾದಂತೆ ಕಾಣುತ್ತಿದೆ. ಮತಗಟ್ಟೆ ಸಮೀಕ್ಷೆ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ(Rahul Gandhi) ಮೀಟಿಂಗ್ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಬಿದ್ದ ಮರಗಳು..ಅಂಡರ್‌ಪಾಸ್‌ಗಳು ಜಲಾವೃತ