ಮಳೆಗೆ ಬೆಂಗಳೂರು ತತ್ತರ: ಹಲವೆಡೆ ಬಿದ್ದ ಮರಗಳು..ಅಂಡರ್‌ಪಾಸ್‌ಗಳು ಜಲಾವೃತ
ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಅಂಡರ್ ಪಾಸ್ ಜಲಾವೃತಗೊಂಡಿದ್ದು, ವಾಹನಗಳು, ಅಂಗಡಿ ಮುಂಗಟ್ಟುಗಳ ಮೇಲೆ ಮರ ಉರುಳಿ ಬಿದ್ದಿದೆ.
ಬೆಂಗಳೂರು: ಭಾರೀ ಮಳೆ ಹಿನ್ನೆಲೆ ಸಿಲಿಕಾನ್ ಸಿಟಿಯ(Bengaluru) ರಸ್ತೆಗಳು ಕೆರೆಯಂತಾಗಿವೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದೆ. ಶಂಕರಪುರ ಮುಖ್ಯರಸ್ತೆಯಲ್ಲಿ ಮಳೆಯಿಂದ(Rain) ಅವಾಂತರ ಉಂಟಾಗಿದೆ. ರಸ್ತೆ ಮಧ್ಯೆ ಎರಡ್ಮೂರು ಅಡಿ ನೀರು ನಿಂತಿದೆ. ಕರೆಂಟ್ ಲೈನ್ ಮೇಲೆ ಮರ ಬಿದ್ದು ಕತ್ತಲು ಆವರಿಸಿತ್ತು. ಅಲ್ಲದೇ ಮಳೆಗೆ 200ಕ್ಕೂ ಅಧಿಕ ಮರಗಳು ಧರೆಗುರುಳಿವೆ. ಗಾಂಧಿ ಬಜಾರ್ ಕೊ-ಆಪರೇಟಿವ್ ಬ್ಯಾಂಕ್ ಬಳಿ ಮರ ಬಿದ್ದಿದೆ. ಇನ್ನೂ ಮರಗಳ ಜೊತೆಗೆ ಕರೆಂಟ್ ಕಂಬಗಳು ಬಿದ್ದಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಕಂಬಗಳು ಜೋತಾಡುತ್ತಿವೆ. ಚಾಮರಾಜಪೇಟೆ ವಿವಿಪುರಂ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ಕೊಟ್ಟಂತಿದೆ ಬೆಸ್ಕಾಂ ವಿದ್ಯುತ್ ಕಂಬಗಳು.
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಇಂದು ಮಾನಸಿಕ ಕಿರಿಕಿರಿ ಇರಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ..