
ಭಜರಂಗದಳ ಬ್ಯಾನ್ ವಿಚಾರ: ಮಂಡ್ಯದ ಕೆರೆಗೋಡಿನಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ವಿಚಾರ
ಮಂಡ್ಯದ ಕೆರೆಗೋಡಿನಲ್ಲಿ ಬಜರಂಗದಳದಿಂದ ಪ್ರತಿಭಟನೆ
ಕಾಂಗ್ರೆಸ್‌ನ ಪ್ರಣಾಳಿಕೆ ಪ್ರತಿ ಸುಟ್ಟು ಕಾರ್ಯಕರ್ತರು ಆಕ್ರೋಶ
ಭಜರಂಗದಳ ಬ್ಯಾನ್ ಮಾಡುತ್ತೇವೆ ಎಂದ ಕಾಂಗ್ರೆಸ್ ವಿರುದ್ಧ ಭಜರಂಗದಳ ಕಾರ್ಯಕರ್ತರು ಮಂಡ್ಯದ ಕೆರೆಗೋಡಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಒಂದು ಧರ್ಮದ ಓಲೈಕೆಗೆ ಈ ರೀತಿ ಪ್ರಯತ್ನ ನಡೆಸುತ್ತಿದೆ ಎಂದು ಈ ವೇಳೆ ಆರೋಪ ಮಾಡಿದ್ದಾರೆ. ಪ್ರತಿಭಟನೆಯ ಭಾಗವಾಗಿ ಕಾರ್ಯಕರ್ತರು ಕಾಂಗ್ರಸ್‌ನ ಪ್ರಣಾಳಿಕೆ ಪ್ರತಿಯನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಡಿಕೆಶಿ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ನಡುವೆ ನಾಳೆ ರಾಜ್ಯದ ಎಲ್ಲಾ ಕಡೆಯಿಂದ ಪ್ರತಿಭಟನೆ ನಡೆಸಲು ಭಜರಂಗದಳ ತೀರ್ಮಾನಿಸಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಪ್ರಣಾಳಿಕೆಯಲ್ಲೂ ಯಟವಟ್ಟು ಮಾಡಿಕೊಳ್ತಾ ಕಾಂಗ್ರೆಸ್? : ಸಿಟ್ಟಿಗೆದ್ದಿರುವ ಹಿಂದೂಪರ ಸಂಘಟನೆಗಳು