ಪ್ರಣಾಳಿಕೆಯಲ್ಲೂ ಯಟವಟ್ಟು ಮಾಡಿಕೊಳ್ತಾ ಕಾಂಗ್ರೆಸ್‌? : ಸಿಟ್ಟಿಗೆದ್ದಿರುವ ಹಿಂದೂಪರ ಸಂಘಟನೆಗಳು

ಕಾಂಗ್ರೆಸ್‌ ನಾಯಕರು ಇಷ್ಟು ದಿನ ತಮ್ಮ ಹೇಳಿಕೆಗಳ ಮೂಲಕ ಯಡವಟ್ಟು ಮಾಡಿಕೊಳ್ಳುತ್ತಿದ್ದರು. ಆದ್ರೆ ಇದೀಗ ಪ್ರಣಾಳಿಕೆಯಿಂದಲೇ ಯಡವಟ್ಟು ಮಾಡಿಕೊಂಡಿದ್ದು, ಹಿಂದೂ ಪರ ಸಂಘಟನೆಗಳು ಕಾಂಗ್ರೆಸ್‌ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿವೆ.

First Published May 3, 2023, 11:20 AM IST | Last Updated May 3, 2023, 11:20 AM IST

ರಾಜ್ಯದಲ್ಲಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್‌, ಪ್ರಚಾರದ ಭರದಲ್ಲಿ ಸಾಲು ಸಾಲು ಯಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಈ ಹಿಂದೆ ಸಿದ್ದರಾಮಯ್ಯ ಲಿಂಗಾಯತ ಸಿಎಂಗಳು ಭ್ರಷ್ಟರು ಎಂದು ಹೇಳಿ, ಲಿಂಗಾಯತರ ಕೆಂಗಣ್ಣಿಗೆ ಗುರಿಯಾಗಿದ್ದರು. ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯನ್ನು ಹಾವಿಗೆ ಹೋಲಿಸಿ ಬಹಳ ಟೀಕೆಗೆ ಗುರಿಯಾದರು. ಇನ್ನೂ ಪ್ರಿಯಾಂಕ್‌ ಖರ್ಗೆ ಮೋದಿ ಟೀಕಿಸೋ ಭರದಲ್ಲಿ ನಾಲಾಯಕ್‌ ಪದ ಬಳಸಿದ್ರು. ಈ ಎಲ್ಲಾದರ ಮಧ್ಯೆಯೂ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿಯೂ ವಿವಾದವನ್ನು ಸೃಷ್ಟಿ ಮಾಡಿಕೊಂಡಿದೆ. ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೇ ಬಜರಂಗದಳವನ್ನು ಬ್ಯಾನ್‌ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಇದಕ್ಕೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಿಂದೂ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿವೆ. 

ಇದನ್ನೂ ವೀಕ್ಷಿಸಿ: News Hour: ಭಜರಂಗಿಗಳ ತಂಟೆಗೆ ಬಂದು ಕೈಸುಟ್ಟಿಕೊಂಡಿತಾ ಕಾಂಗ್ರೆಸ್‌?

Video Top Stories