
ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಸ್ಪರ್ಧೆ ಫಿಕ್ಸ್ ? ಪ್ರೀತಂ ಗೌಡ ಜೊತೆ ಅಂತರ ಕಾಯ್ದುಕೊಂಡ ರೇವಣ್ಣ ಪುತ್ರ!
ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿ ಅಧಿಕೃತ ಘೋಷಣೆ ಆಗಿಲ್ಲ
ಹೈಕಮಾಂಡ್ ನಿರ್ದೇಶನ ಕಾಯುತ್ತಿರೋ ಪ್ರೀತಂ ಗೌಡ ಟೀಮ್
ಹಾಸನ ಕ್ಷೇತ್ರದಲ್ಲಿ ತನ್ನದೆ ಪ್ರಾಬಲ್ಯ ಹೊಂದಿರೋ ಪ್ರೀತಂ ಗೌಡ
ಹಾಸನದಲ್ಲಿ ಲೋಕಸಭೆ ಟಿಕೆಟ್ ಫೈಟ್ ಜೋರಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ(Prajwal Revanna) ಸ್ಪರ್ಧೆ ಫಿಕ್ಸ್ ಎನ್ನಲಾಗ್ತಿದೆ. ಇದಕ್ಕೆ ಬಿಜೆಪಿ(BJP) ನಾಯಕ ಪ್ರೀತಂ ಗೌಡ(Preetham Gowda) ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣಗೆ ಟಿಕೆಟ್(Ticket)ಕೊಡಬೇಡಿ ಎಂದು ಪ್ರೀತಂ ಗೌಡ ಹೇಳಿದ್ದಾರೆ. ಹಾಸನದಲ್ಲಿ(Hassan) ಪ್ರೀತಂ ಗೌಡಗೆ ಸಂಸದ ಪ್ರಜ್ವಲ್ ರೇವಣ್ಣ ಟಾಂಗ್ ಕೊಟ್ಟಿದ್ದಾರೆ. ಪ್ರೀತಂ ಗೌಡ ಜೊತೆ ಅಂತರ ಕಾಯ್ದುಕೊಂಡು ನಾಯಕರ ಮೊರೆ ಹೋದ ಪ್ರಜ್ವಲ್. ಐ ನೆಟ್ ವಿಜಯ್ ಸೇರಿ ಹಲವರ ಮನೆಗೆ ಹೋಗಿ ಸ್ನೇಹ ಹಸ್ತ ಚಾಚಿದ ಪ್ರಜ್ವಲ್. ಆರ್‌ಎಸ್‌ಎಸ್ ಮುಖಂಡರ ಮನೆಗೆ ಹೋಗಿ ಸಹಕಾರವನ್ನು ರೇವಣ್ಣ ಪುತ್ರ ಕೋರಿದ್ದಾರೆ. ಪ್ರೀತಂ ಗೌಡ ಜೊತೆ ಅಂತರ ಕಾಯ್ದುಕೊಂಡಿರೋ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Election Campaign: ಕಾಂಗ್ರೆಸ್ ‘ಜನಶಕ್ತಿ’ ಪ್ರಚಾರ: ಬಸವಕಲ್ಯಾಣದಿಂದ ಪ್ರಚಾರಕ್ಕೆ ರಾಹುಲ್ ಗಾಂಧಿ ಚಾಲನೆ