Election Campaign: ಕಾಂಗ್ರೆಸ್ ‘ಜನಶಕ್ತಿ’ ಪ್ರಚಾರ: ಬಸವಕಲ್ಯಾಣದಿಂದ ಪ್ರಚಾರಕ್ಕೆ ರಾಹುಲ್‌ ಗಾಂಧಿ ಚಾಲನೆ

ಜನ ಶಕ್ತಿ ಹೆಸರಿನಲ್ಲಿ ಸಮಾವೇಶ ಮಾಡಲು ಕಾಂಗ್ರೆಸ್‌ನಿಂದ ಯೋಜನೆ 
ಬಸವ ಕಲ್ಯಾಣದಿಂದ ಅಧಿಕೃತ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ 
ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಗಿ

Share this Video
  • FB
  • Linkdin
  • Whatsapp

ಲೋಕಸಭಾ ಅಖಾಡಕ್ಕೆ ತಿಂಗಳಾಂತ್ಯಕ್ಕೆ ಕಹಳೆ ಮೊಳಗಿಸಲು ಕಾಂಗ್ರೆಸ್(Congress)ಸಿದ್ಧತೆ ಮಾಡಿಕೊಂಡಿದೆ. ಮಾ.28 ಅಥವಾ 29 ರಂದು ಚುನಾವಣಾ ಪ್ರಚಾರಕ್ಕೆ(Election campaign) ಅಧಿಕೃತವಾಗಿ ರಣ ಕಹಳೆ ಮೊಳಗಿಸಲಿದೆ. ಇಂದು ಸಿಎಂ ಹಾಗೂ ಡಿಸಿಎಂಗೆ ಲೋಕಸಮರದ ಪ್ರಚಾರಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡಲಿದ್ದಾರೆ. ಬಸವರಾಜ ರಾಯರೆಡ್ಡಿ, ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಪ್ಲ್ಯಾನ್‌ ಮಾಡಲಿದ್ದು, ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ಇವರು ಹೊತ್ತಿದ್ದಾರೆ. ರಾಜ್ಯದಲ್ಲಿ ಲೋಕಸಮರದ ಪ್ರಚಾರಕ್ಕೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಒಂದೇ ವೇದಿಕೆಯಲ್ಲಿ ಎಲ್ಲಾ ನಾಯಕರನ್ನ ಒಗ್ಗೂಡಿಸಿ ಲೋಕಸಭಾ ಪ್ರಚಾರ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ(Siddaramaiah) ,ಡಿಸಿಎಂ ಡಿಕೆ ಶಿವಕುಮಾರ್(DK shivakumar) ನೇತೃತ್ವದಲ್ಲಿ ಪ್ರಚಾರ ನಡೆಯಲಿದ್ದು, ಬೀದರ್ ಲೋಕಸಭಾ ವ್ಯಾಪ್ತಿಯ ಬಸವಕಲ್ಯಾಣದಿಂದ(Basavakalyana) ಪ್ರಚಾರಕ್ಕೆ ಚಾಲನೆ ದೊರೆಯಲಿದೆ.

ಇದನ್ನೂ ವೀಕ್ಷಿಸಿ: ಆ್ಯಂಗ್ರಿ ಯಂಗ್ ಆಫ್ ತೆಲುಗು ಪವನ್ ಕಲ್ಯಾಣ್ ಈಸ್ ಬ್ಯಾಕ್ ..ಉಸ್ತಾದ್ ಭಗತ್ ಸಿಂಗ್ ಟೀಸರ್ ಫಸ್ಟ್ ಕ್ಲಾಸ್!

Related Video