ಶಿವನ ಕೊರಳಿನಲ್ಲಿರುವ ಹಾವಿನಂತೆ ನಾನು : ಮೋದಿ

ಪ್ರಧಾನಿ ಮೋದಿ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ, ಕನ್ನಡದಲ್ಲೇ ಭಾಷಣವನ್ನು ಆರಂಭ ಮಾಡಿದ್ರು.

First Published Apr 30, 2023, 3:17 PM IST | Last Updated Apr 30, 2023, 3:17 PM IST

ಕೋಲಾರ: ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಎರಡು ದಿನಗಳ ರಾಜ್ಯ ಪ್ರವಾಸದಲ್ಲಿದ್ದಾರೆ. ಇಂದು ಕೋಲಾರ, ರಾಮನಗರ ಮತ್ತು ಮೈಸೂರಿನಲ್ಲಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಕೋಲಾರಕ್ಕೆ ಮೋದಿ ಆಗಮಿಸಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದರು. ಚಿನ್ನದ ನಾಡಿನ ಕೋಲಾರದ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್‌ ಕಂಟಕವಾಗಿದೆ. ಇಂದು ಇಲ್ಲಿ ಸೇರಿರುವ ಜನಸಾಗರ ಎರಡೂ ಪಕ್ಷಗಳ ನಿದ್ದೆಗೆಡಿಸಿದೆ. ಅಸ್ಥಿರ ಸರ್ಕಾರದಿಂದ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಈ ಸರ್ಕಾರದಿಂದ ಲಾಭಕ್ಕಿಂತ, ನಷ್ಟವೇ ಜಾಸ್ತಿ. ಹಾಗಾಗಿ ಈ ಸಾರಿ ಅಸ್ಥಿರ ಸರ್ಕಾರಕ್ಕೆ ಅವಕಾಶ ನೀಡದೇ, ಬಿಜೆಪಿಗೆ ಸಂಪೂರ್ಣ ಬಹುಮತ ನೀಡಿ ಎಂದು ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡರು. ಕಾಂಗ್ರೆಸ್‌ ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕಾಂಗ್ರೆಸ್‌ ಜಾರಿಗೊಳಿಸಿರುವ ಪ್ರತಿಯೊಂದು ಯೋಜನೆಯಲ್ಲೂ ಭ್ರಷ್ಟಾಚಾರ ತುಂಬಿದೆ. ಮೋದಿಯವರೇ ನಿಮ್ಮ ಸಮಾಧಿಗೆ ಹಳ್ಳ ತೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್‌ನವರು ಸದ್ಯ ಹಾವಿನ ವಿಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನನ್ನನ್ನು ಹಾವಿಗೆ ಹೋಲಿಸುತ್ತಿದ್ದಾರೆ. ಆದ್ರೆ ನನಗೆ ಇದರಿಂದ ಬೇಸರವಿಲ್ಲ. ನಾನು ಇದನ್ನು ಸ್ವೀಕಾರ ಮಾಡುತ್ತೇನೆ. ಯಾಕೆಂದರೆ ಭಗವಾನ್‌ ಶಂಕರನ ಕೊರಳಿನಲ್ಲಿ ಇರುವುದೂ ಹಾವು ಎಂದು ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರ ಎಂಬ ಘೋಷವಾಖ್ಯದೊಂದಿಗೆ ಮೋದಿ ಮಾತನ್ನು ಮುಗಿಸಿದರು.

ಇದನ್ನೂ ವೀಕ್ಷಿಸಿ: karnataka election:ನಿನ್ನೆ ಬೆಂಗಳೂರು ಇಂದು ಮೈಸೂರಿನಲ್ಲಿ 'ನಮೋ' ರೋಡ್‌ ಶೋ