karnataka election:ನಿನ್ನೆ ಬೆಂಗಳೂರು ಇಂದು ಮೈಸೂರಿನಲ್ಲಿ 'ನಮೋ' ರೋಡ್‌ ಶೋ


ಹಳೆ ಮೈಸೂರಿನ ಶಕ್ತಿಕೇಂದ್ರ ಮೈಸೂರಿನಲ್ಲಿ ಮೋದಿ ರೋಡ್ ಶೋ
ಮತದಾರನ ಸೆಳೆಯಲು ಮೋದಿಯಿಂದ ಅಭಿವೃದ್ಧಿ ಮಂತ್ರ
3 ಕ್ಷೇತ್ರಗಳಲ್ಲಿ ಸಂಚರಿಸಲಿರುವ ಮೋದಿ ಮೆಗಾ ರೋಡ್‌ ಶೋ

Share this Video
  • FB
  • Linkdin
  • Whatsapp

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಿರುವ ಪ್ರಧಾನಿ ಮೋದಿ, ಇಂದು ಮೈಸೂರಿನಲ್ಲಿ ನಡೆಸಲಿದ್ದಾರೆ. ಇಲ್ಲಿನ ಮೂರು ಕ್ಷೇತ್ರಗಳಲ್ಲಿ ಮೋದಿ ಸಂಚಾರ ನಡೆಸಲಿದ್ದಾರೆ. ಮತದಾರರನ್ನು ಸೆಳೆಯಲು ಅಭಿವೃದ್ಧಿ, ಒಕ್ಕಲಿಗರ ಓಲೈಕೆ, ಹಿಂದುತ್ವದ ಅಸ್ತ್ರವನ್ನು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಸುಮಾರು ನಾಲ್ಕು ಕಿಲೋ ಮೀಟರ್‌ ಮೋದಿ ರೋಡ್ ಶೋ ನಡೆಸಲಿದ್ದು, ಕೆ. ಆರ್‌ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಿ, ಚಾಮರಾಜ ವಿಧಾನಸಭಾ ಮೂಲಕ ಹಾದು, ನರಸಿಂಹ ವಿಧಾನಸಭಾ ಕ್ಷೇತ್ರದಲ್ಲಿ ಅಂತ್ಯವಾಗಲಿದೆ. ಮೋದಿಯವರ ಇಂದಿನ ರೋಡ್‌ ಶೋ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಬಲವನ್ನು ಹೆಚ್ಚಿಸಲಿದೆ ಎಂದೇ ಹೇಳಬಹುದು.

ಇದನ್ನೂ ವೀಕ್ಷಿಸಿ: ಕಳೆದ 9 ವರ್ಷದಲ್ಲಿ ಒಂದು ದಿನವು ವಿರಮಿಸದೇ, ದೇಶಕ್ಕಾಗಿ ದುಡಿದ ನಾಯಕ ಮೋದಿ: ಸದಾನಂದ ಗೌಡ

Related Video