Loksabha Eection 2024: ಪ್ರಧಾನಿ ವಿತ್ ಮಾಜಿ ಪ್ರಧಾನಿ..ಗೌಡರ ಕೋಟೆಯಲ್ಲಿ ಮೋದಿ ಮೇನಿಯಾ..!

ಸಿಎಂ ತವರು ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಘರ್ಜನೆ..! 
ಬೃಹತ್ ಸಮಾವೇಶದ ಮೂಲಕ ಮೋದಿ ಮತಯಾಚನೆ
ಕಾಂಗ್ರೆಸ್ ಸರ್ಕಾರ ವಿರುದ್ಧ ಬ್ಲ್ಯಾಕ್ ಮನಿ ಆರೋಪ

Share this Video
  • FB
  • Linkdin
  • Whatsapp

ಸಿಎಂ ತವರು ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಘರ್ಜಿಸಿದ್ದಾರೆ. ಮೋದಿ (Narendra Modi) ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು(HD Deve Gowda) ಇದ್ದರು. ಈ ವೇಳೆ ಕಾಂಗ್ರೆಸ್‌(Congress) ಕ್ಷೇತ್ರದಲ್ಲೇ ಅವರ 60 ವರ್ಷಗಳ ಇತಿಹಾಸವನ್ನು ಮೋದಿ ಬಿಚ್ಚಿಟ್ಟರು. ಇದಿಷ್ಟೆ ಅಲ್ಲದೇ ಪ್ರಧಾನಿ ಮೋದಿ ತಮ್ಮ 10 ವರ್ಷದ ಸಾಧನೆಯನ್ನ ಜನತೆಯ ಮುಂದಿಟ್ಟರು. ಸಿಎಂ ತವರಲ್ಲಿ ಪ್ರಧಾನಿ ಮೋದಿ ಅದ್ಧೂರಿ ಸಮಾವೇಶ ಮಾಡಿದ್ದಾರೆ. ಈ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಗೌಡರ ಕೋಟೆ ಹಳೆ ಮೈಸೂರಿನಿಂದ(Mysore) ಮೋದಿ ಹೊರಟಿದ್ದು ಕರಾವಳಿ ಭಾಗಕ್ಕೆ. ಪ್ರಧಾನಿ ಮೋದಿ ಮೈಸೂರು ಭಾಗದಲ್ಲಿ ಅಬ್ಬರದ ಪ್ರಚಾರದ ನಂತರ.. ಕರಾವಳಿ ಲೋಕಸಭಾ ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು ಅಲ್ಲಿ ರ್ಯಾಲಿ ನಡೆಸಿದ್ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: HDD VS DKShi: ಬೆಂಗಳೂರು ಸುತ್ತ 1 ಸಾವಿರ ಎಕರೆ ಇದೆ: ಕಡಲೆಕಾಯಿ, ಆಲೂಗಡ್ಡೆ ಬೆಳೆದಿದ್ರಾ? ಹೆಚ್‌ಡಿಡಿಗೆ ಡಿಕೆಶಿ ಪ್ರಶ್ನೆ

Related Video