HDD VS DKShi: ಬೆಂಗಳೂರು ಸುತ್ತ 1 ಸಾವಿರ ಎಕರೆ ಇದೆ: ಕಡಲೆಕಾಯಿ, ಆಲೂಗಡ್ಡೆ ಬೆಳೆದಿದ್ರಾ? ಹೆಚ್‌ಡಿಡಿಗೆ ಡಿಕೆಶಿ ಪ್ರಶ್ನೆ

ಆಸ್ತಿಯ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬರ್ತಿನಿ, ನಿಂದೆಷ್ಟು, ನಿಮ್ಮಣ್ಣನದೆಷ್ಟು ಚರ್ಚೆ ಮಾಡೋಣ ಬಾ. 48 ಎಕರೆ ಇದೆಯೋ?, ಸಾವಿರ ಇದೆಯೋ ಚರ್ಚೆ ಮಾಡೋಣ ಎಂದು ಏಕವಚನದಲ್ಲೇ ಕುಮಾರಸ್ವಾಮಿಗೆ ಡಿಕೆಶಿ ಸವಾಲು ಹಾಕಿದ್ದಾರೆ. 
 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಪಕ್ಷದ ಮುಖಂಡರು ಪರಸ್ಪರ ಏಕವಚನದಲ್ಲೇ ಚಾಟಿ ಬೀಸುತ್ತಿದ್ದು, ಈ ನಡುವೆ ಹೆಚ್‌ಡಿಕೆ ಹಾಗೂ ಡಿಕೆಶಿ ನಡುವೆ ತೀವ್ರ ವಾಗ್ದಾಳಿ ನಡೆಯುತ್ತಿದೆ. ಆಸ್ತಿಯ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬರ್ತಿನಿ, ನಿಂದೆಷ್ಟು, ನಿಮ್ಮಣ್ಣನದೆಷ್ಟು ಚರ್ಚೆ ಮಾಡೋಣ ಬಾ. 48 ಎಕರೆ ಇದೆಯೋ? ಸಾವಿರ ಇದೆಯೋ ಚರ್ಚೆ ಮಾಡೋಣ ಎಂದು ಏಕವಚನದಲ್ಲೇ ಕುಮಾರಸ್ವಾಮಿಗೆ(HD Kumaraswamy) ಡಿಕೆಶಿ ಸವಾಲು ಹಾಕಿದ್ದಾರೆ. ನನ್ನ ಆಸ್ತಿಯ ಬಗ್ಗೆ ಇಡಿ, ಸಿಬಿಐ ಸಮೀಕ್ಷೆ ಮಾಡುತ್ತಿದೆ. ಹಿಟ್ ಅಂಡ್ ರನ್ ಬೇಡ ಎಂದ ಅವರು, ಬಿಡಿಎದಲ್ಲಿ ಬಾಚಿಕೊಳ್ತಿದ್ದಾರೆ ಎಂದು ಆರೋಪ ಮಾಡಿದ್ದ ದೇವೇಗೌಡ ಆರೋಪಕ್ಕೂ ಈ ವೇಳೆ ಡಿಕೆಶಿ(DK Shivakumar) ಆಕ್ರೋಶ ಹೊರಹಾಕಿದ್ದು, ಗೌಡರ ಕುಟುಂಬದ ಆಸ್ತಿ ಬಗ್ಗೆ ಲೆಕ್ಕ ಕೊಡಲೇ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ನಾಳೆ ಕಲಬುರಗಿಯಲ್ಲಿ ಬೆಂಬಲಿಗರ ಸಭೆ ಕರೆದ ಮಾಲೀಕಯ್ಯ ಗುತ್ತೇದಾರ: ಕಾಂಗ್ರೆಸ್ ಸೇರಿ ಖರ್ಗೆ ಅಳಿಯನ ಗೆಲುವಿಗೆ ಶ್ರಮ ಹಾಕ್ತಾರಾ ?

Related Video