Modi in Shivamogga:ಮೋದಿ ಕಾರ್ಯಕ್ರಮಕ್ಕೆ ಹೋಗ್ತಾರಾ ರೆಬೆಲ್ ನಾಯಕ ? ಸಂಧಾನಕ್ಕೆ ಬಂದವರನ್ನ ಕೂರಿಸಿ ಹೊರಗೆ ಹೋಗಿದ್ದ ಈಶ್ವರಪ್ಪ!

ನಿನ್ನೆ ಕೇಂದ್ರ ನಾಯಕರ ಮನವೊಲಿಕೆಗೂ ಬಗ್ಗದ ಈಶ್ವರಪ್ಪ
ಈಶ್ವರಪ್ಪ ನಿವಾಸದಲ್ಲೇ ಕುಳಿತು ವಾಪಸ್ ಬಂದ ನಾಯಕರು
ಕೆ.ಎಸ್‌. ಈಶ್ವರಪ್ಪ ಜೊತೆಗಿನ ಹೈಕಮಾಂಡ್ ಸಂಧಾನ ವಿಫಲ

Share this Video
  • FB
  • Linkdin
  • Whatsapp

ಕಲಬುರಗಿ ಬಳಿಕ ಇಂದು ಶಿವಮೊಗ್ಗದಲ್ಲಿ(Shivamogga) ನಮೋ ಅಬ್ಬರ ಶುವಾಗಲಿದ್ದು, ಮಲೆನಾಡಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಇದರ ಜೊತೆಗೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಈಶ್ವರಪ್ಪ(KS Eshwarappa) ಬಂಡಾಯ ಎದ್ದಿದ್ದು, ಮಾತಿಗೂ ಬಗ್ಗಲಿಲ್ಲ. ಸಂಧಾನಕ್ಕೂ ಜಗ್ಗುತ್ತಿಲ್ಲ. ಇಂದು ಮೋದಿ(Narendra Modi) ಕಾರ್ಯಕ್ರಮಕ್ಕೆ ರೆಬೆಲ್ ನಾಯಕ ಹೋಗ್ತಾರಾ ಇಲ್ವಾ ಅನ್ನೋದೇ ಸಸ್ಪೆನ್ಸ್ ಆಗಿದೆ. ಈಶ್ವರಪ್ಪಗೆ ಕಾದು ಕುಳಿತಿದ್ದ ರಾಧಾ ಮೋಹನ್ ಅಗರ್‌ವಾಲ್‌ ಅವರನ್ನು ಮನೆಯಲ್ಲಿ ಕೂರಿಸಿ ಹೊರ ಹೋಗಿದ್ದಾರೆ. ಬಳಿಕ ಈಶ್ವರಪ್ಪ ಮನೆಯಿಂದ ರಾಧಾ ಮೋಹನ್ ಅಗರ್‌ವಾಲ್‌ ವಾಪಸ್ ತೆರಳಿದ್ದಾರೆ. ಸ್ಪಧೆಯಿಂದ ಹಿಂದೆ ಸರಿಯಲ್ಲ ಎಂದ ಈಶ್ವರಪ್ಪ ಖಡಕ್‌ ಆಗಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ(Shivamogga) ಇಂದು ಪ್ರಧಾನಿ ಮೋದಿ ಮೆಗಾ ಶೋ ನಡೆಸಲಿದ್ದು, ಬಿಎಸ್‌ವೈ ತವರಲ್ಲಿ ನರೇಂದ್ರ ಮೋದಿ ಮತಬೇಟೆ ನಡೆಸಲಿದ್ದಾರೆ. ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. 

ಇದನ್ನೂ ವೀಕ್ಷಿಸಿ: Sumalatha:ಬಿಜೆಪಿ ಬೆಂಬಲಿಸಿ ಅಡಕತ್ತರಿಯಲ್ಲಿ ಸಿಲುಕಿದ್ರಾ ರೆಬೆಲ್ ಲೇಡಿ‌!? ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಸಾಧ್ಯತೆ ?

Related Video