Sumalatha:ಬಿಜೆಪಿ ಬೆಂಬಲಿಸಿ ಅಡಕತ್ತರಿಯಲ್ಲಿ ಸಿಲುಕಿದ್ರಾ ರೆಬೆಲ್ ಲೇಡಿ‌!? ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಸಾಧ್ಯತೆ ?

ಮಂಡ್ಯ ಜೆಡಿಎಸ್ ಪಾಲಾದ್ರೆ ಹಾಲಿ ಸಂಸದೆ ಸುಮಲತಾ ನಡೆ..?
ತೀವ್ರ ಕುತೂಹಲ ಕೆರಳಿಸುತ್ತಿದೆ ರೆಬೆಲ್ ಲೇಡಿ ಮುಂದಿನ ಹೆಜ್ಜೆ?
ಮೊನ್ನೆವರೆಗೂ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾ..!

First Published Mar 18, 2024, 10:29 AM IST | Last Updated Mar 18, 2024, 10:29 AM IST

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಬಿಜೆಪಿ(BJP) ವಿರುದ್ಧ ಸಂಸದೆ ಸುಮಲತಾ(MP Sumalatha) ತೀವ್ರ ಅಸಮಾಧಾನವನ್ನು ಹೊರಹಾಕಿದ್ದು, ಸುಮಲತಾ ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಪ್ರಯತ್ನ ಮಾಡುತ್ತಿದೆ. ಮೈತ್ರಿ ಧರ್ಮ ಪಾಲಿಸಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ. ಮಂಡ್ಯವನ್ನ(Mandya) ಅನಿವಾರ್ಯವಾಗಿ ಬಿಟ್ಟು ಕೊಡುವ ಸ್ಥಿತಿಯಲ್ಲಿ ಬಿಜೆಪಿ ಇದ್ದು, ಮಂಡ್ಯ ನಂದೇ ಎಂದಿದ್ದ ಸುಮಲತಾ ಮನವೊಲಿಕೆಗೆ ಬಿಜೆಪಿ ಮುಂದಾಗಿದೆ. ಚಿಕ್ಕಬಳ್ಳಾಪುರ(Chikkaballapur) ಲೋಕಸಭೆಯಿಂದ(Loksabha) ಸುಮಲತಾ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಚಿಕ್ಕಬಳ್ಳಾಪುರಕ್ಕಾಗಿ ಡಾ.ಸುಧಾಕರ್, SR ವಿಶ್ವನಾಥ್ ಪುತ್ರ ಅಲೋಕ್ ಲಾಬಿ ಮಾಡುತ್ತಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದ್ರೂ ಬಿಜೆಪಿಯಲ್ಲಿ ಬಂಡಾಯ ಸಾಧ್ಯತೆ. ಚಿಕ್ಕಬಳ್ಳಾಪುರದಲ್ಲಿ ಬಲಿಜ, ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ. ಚಿಕ್ಕಬಳ್ಳಾಪುರದಿಂದ ಸಂಸದೆ ಸುಮಲತಾ ಸ್ಪರ್ಧೆ ಬಗ್ಗೆ ದೆಹಲಿ ನಾಯಕರ ಒಲವು ತೋರಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Karnataka Politics: ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರಾ ಸುಮಲತಾ ? ಸಂಸದೆಗೆ ಮಂಡ್ಯ ಟಿಕೆಟ್ ಕೈತಪ್ಪುತ್ತಾ ?

Video Top Stories