Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ ಗಿರಿ ಪ್ರದರ್ಶನ: ಯುವತಿಯಿಂದ ದೂರು ದಾಖಲು, ಇಬ್ಬರ ಬಂಧನ

ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಇದ್ದ ವೇಳೆ, ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಯುವಕರು ನೈತಿಕ ಪೊಲೀಸ್‌ ಗಿರಿ ಪ್ರದರ್ಶಿಸಿದ್ದಾರೆ. 
 

ಚಿಕ್ಕಬಳ್ಳಾಪುರ: ನಗರದ ಗೋಪಿಕಾ ಚಾಟ್ಸ್‌ ಬಳಿ ಮೇ. 24 ರಂದು ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಹೋಟೆಲ್‌ಗೆ ಹೋಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಮುಸ್ಲಿಂ ಯುವಕರ ತಂಡ ನೈತಿಕ ಪೊಲೀಸ್‌ ಗಿರಿ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಯುವತಿ ದೂರನ್ನು ನೀಡಿದ್ದು, ಇಬ್ಬರನ್ನು ಪೊಲೀಸರು ಬಂದಿದ್ದಾರೆ. ನಗರದ ನಕ್ಕಲಕುಂಟೆ ನಿವಾಸಿಗಳಾದ ವಾಯಿದ್ (20), ಸದ್ದಾಂ (21) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಇಮ್ರಾನ್​ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ: Today Horoscope: ಇಂದಿನ ರಾಶಿ ಭವಿಷ್ಯ: ಆರೋಗ್ಯ ವೃದ್ಧಿಗೆ ಈ ದಿನ ನಾಗ ದೇವರಿಗೆ ಎಳನೀರು ಅಭಿಷೇಕ ಮಾಡಿ

Video Top Stories