
ಲೋಕಸಮರಕ್ಕೆ ಮೋದಿಯ ಪ್ರಾದೇಶಿಕಾಸ್ತ್ರ: ಜುಲೈ 18ಕ್ಕೆ ಮೀಟಿಂಗ್ ಕರೆದ ಪ್ರಧಾನಿ
ಎನ್‌ಡಿಎ ಮೈತ್ರಿಕೂಟಕ್ಕೆ ಶಿಂಧೆ ಟೀಮ್..?
ಮೋದಿಯ ಶೇಕ್ ಹ್ಯಾಂಡ್ ಮಾಡುತ್ತಾ NCP..?
ಮೋದಿ ವಿರೋಧಿಗಳಿಗೆ ಕಾದಿದೆಯಾ ಸಂಕಷ್ಟ..?
ಮೋದಿಯನ್ನ ಈ ಬಾರಿ ಶತಾಯಗತಾಯ ಸೋಲಿಸಲೇ ಬೇಕು ಅನ್ನೊದು ಮೋದಿ ವಿರೋಧಿಗಳ ಏಕಮಾತ್ರ ಗುರಿ. ಹಿಂದಿನ ಬಾರಿ ಕೂಡ ಎಲ್ಲಾ ಪಕ್ಷಗಳು ಒಟ್ಟಾಗಿ ಮೋದಿಯನ್ನ(Modi) ಸೋಲಿಸೋ ಯತ್ನಕ್ಕೆ ಕೈ ಹಾಕಿದ್ದವು. ಮಹಾಘಟಬಂಧನವನ್ನ ಮಾಡಿಕೊಂಡಿದ್ದ ಪಕ್ಷಗಳು ಮೋದಿ ಸುನಾಮಿಗೆ ಸಿಕ್ಕಿ ಹೇಳ ಹೆಸರಿಲ್ಲದಂತೆ ಕೊಚ್ಚಿಹೋಗಿದ್ದ ಇತಿಹಾಸ. ಈ ಬಾರಿಗೂ ಕೂಡ ಎಲ್ಲಾ ಕಡೆ ಕೇಸರಿ ಪತಾಕೆ ಹಾರಿಸೋಕೆ ಬಿಜೆಪಿ(BJP) ಗೇಮ್ ಪ್ಲಾನ್ ಸಿದ್ಧ ಮಾಡಿಕೊಂಡಿದೆ. ಲೋಕಸಭಾ ಚುನಾವಣೆಗೂ(loksabha election) ಮುನ್ನ ದೇಶಾದ್ಯಂತ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ತಿಂಗಳ ಕಾಲ ಬೃಹತ್ ವಿಶೇಷ ಸಂಪರ್ಕ ಅಭಿಯಾನವನ್ನು ನಡೆಸಲು ಬಿಜೆಪಿ ಮುಂದಾಗಿದೆ. ಅಷ್ಟಕ್ಕೇ ಮುಗೀಲಿಲ್ಲ ಮೋದಿ ಪ್ಲಾನ್.. ಎನ್ ಡಿ ಎ ಮೈತ್ರಿಕೂಟವನ್ನ ಸೇರಿ ಅಂತ ಪ್ರಾದೇಶಿಕ ಪಕ್ಷಗಳಿಗೆ ಆಮಂತ್ರಣ ನೀಡಿದ್ದಾರೆ. ಇದೇ ಜುಲೈ 18 ರಂದು ಮೋದಿ ಪ್ರಾದೇಶಿಕ ಪಕ್ಷಗಳ ಮಿಟಿಂಗ್ ನಡೆಸಲಿದ್ದಾರೆ. ಒಂದಿಷ್ಟು ಪಕ್ಷಗಳು ಪಾಸಿಟಿವ್ ಆಗಿಯೇ ರೆಸ್ಪಾನ್ಸ್ ಕೊಟ್ಟಿರೋದಕ್ಕೆ ಎನ್ ಡಿ ಎ ಮೈತ್ರಿಕೂಟದ ಗಾತ್ರ ದೊಡ್ಡದಾಗೋ ಸೂಚನೆ ಸಿಕ್ಕಿದೆ.
ಇದನ್ನೂ ವೀಕ್ಷಿಸಿ: ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ ?: ಪ್ರಿಯಾಂಕ್ ಖರ್ಗೆ ಲೇವಡಿ