ಸಿದ್ದರಾಮಯ್ಯ ಸರ್ಕಾರಕ್ಕೆ ಸಾಲು ಸಾಲು ಸವಾಲು: ಗ್ಯಾರಂಟಿ, ಬರಗಾಲಕ್ಕೆ ಹಣ ಸಂಗ್ರಹವೇ ದೊಡ್ಡ ಟಾಸ್ಕ್‌ ?

ರಾಜ್ಯ ಸರ್ಕಾರದ ನೂತನ ಯೋಜನೆಗಳಿಗೆ ಬರಗಾಲ ಅಡ್ಡಿಯಾಗುವ ಸಾಧ್ಯತೆ ಇದೆ. ಎಲ್ಲಾದಕ್ಕೂ ಹಣವನ್ನು ಕ್ರೂಢಿಕರಿಸುವುದು ದೊಡ್ಡ ಸವಾಲಾಗಿದೆ.
 

Share this Video
  • FB
  • Linkdin
  • Whatsapp

ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಸಾಲು ಸಾಲು ಸವಾಲುಗಳು ಎದುರಾಗಿವೆ. ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲ ಎದುರಾಗಿದೆ. ಬರಗಾಲ ಸಮಸ್ಯೆಗೆ ಈಗ ರಾಜ್ಯ ಸರ್ಕಾರ ಸಿಲುಕಿದೆ. ಹಾಗಾಗಿ ಗ್ಯಾರಂಟಿ ಮತ್ತು ಬರಗಾಲಕ್ಕೆ ಹಣವನ್ನು ಸಂಗ್ರಹಿಸುವುದು ಸರ್ಕಾರಕ್ಕೆ ದೊಡ್ಡ ಟಾಸ್ಕ್‌ ಆಗಿದೆ. ಸದ್ಯ ಕುಡಿಯುವ ನೀರಿಗೆ ಸರ್ಕಾರ ಆದ್ಯತೆ ನೀಡಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ಸಹ ನೀಡಲಾಗಿದೆ. ರಾಜ್ಯದ ಅನೇಕ ಡ್ಯಾಮ್‌ಗಳಲ್ಲಿ ನೀರು ಕಡಿಮೆಯಾಗಿದೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಮೊತ್ತದ ಹಣವನ್ನು ಕ್ರೂಢಿಕರಿಸಬೇಕಾಗಿದೆ.

ಇದನ್ನೂ ವೀಕ್ಷಿಸಿ: ವಿಪಕ್ಷಗಳ ಒಗ್ಗಟ್ಟು ನೋಡಿ ಬೆಚ್ಚಿಬಿತ್ತಾ ಬಿಜೆಪಿ ?: ಕೇಂದ್ರದ ಬಗ್ಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅಪಹಾಸ್ಯ

Related Video