ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

ಸಿದ್ದು ಸರ್ಕಾರದ ವಿರುದ್ಧ ದಳಪತಿಯ "YST" ಬಾಂಬ್..!
"YST" ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ ಅಂದ್ರು ಎಚ್‌ಡಿಕೆ..!
ಸಿಎಂ ಕಚೇರಿ ವಿರುದ್ಧವೇ ನೇರ ಆರೋಪ ಮಾಡಿದ ದಳಪತಿ

Share this Video
  • FB
  • Linkdin
  • Whatsapp

YST ಸೀಕ್ರೆಟ್, 30 ಲಕ್ಷದ ರಹಸ್ಯ. ಇದು ಸಿದ್ದರಾಮಯ್ಯ ನೇತೃತ್ವದ ಕೈ ಸರ್ಕಾರದ ವಿರುದ್ಧ ದಳಪತಿ ಕುಮಾರಸ್ವಾಮಿ ಸ್ಫೋಟಿಸಿರೋ ಬಾಂಬ್. ನೇರವಾಗಿ ಸಿಎಂ ಬುಡದಲ್ಲೇ ಸ್ಫೋಟಿಸಿರುವ ಆಟಂ ಬಾಂಬ್. ಸಿದ್ದು ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ವರ್ಗಾವಣೆ ದಂಧೆಯ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ GST ಜೊತೆ YST ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ ಅಂದಿದ್ದಾರೆ. GST ಬಗ್ಗೆ ನಿಮ್ಗೆ ಗೊತ್ತಿರ್ಲೇಬೇಕು. GST ಅಂದ್ರೆ Goods & Service Tax, ಅಂದ್ರೆ ಸರಕು ಮತ್ತು ಸೇವಾ ತೆರಿಗೆ. ಇದು 2017ರಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ಕ್ರಾಂತಿಕಾರಿ ನಿರ್ಧಾರ. ಏನಿದು ಕುಮಾರಸ್ವಾಮಿಯವರು ಹೇಳ್ತಿರೋ YST ತೆರಿಗೆ..? YSTನಲ್ಲಿ T ಅಂದ್ರೆ ಟ್ಯಾಕ್ಸ್ ಅನ್ನೋದು ಸ್ಪಷ್ಟ. ಹಾಗಾಗ್ರೆ ವೈ ಅಂದ್ರೇನು, YST ಟ್ಯಾಕ್ಸನ್ನು ಸರ್ಕಾರವೇ introduce ಮಾಡಿದ್ಯಂತೆ.. ಅಂದ್ರೆ ಜನ ಹೊಸ ತೆರಿಗೆ ಕಟ್ಟೋಕೆ ರೆಡಿಯಾಗ್ಬೇಕಾ..? ಹಾಗೇನೂ ಇಲ್ಲ.. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಿಸಿರೋ YST ಬಾಂಬ್'ನ ಸೀಕ್ರೆಟ್ ಬೇರೆಯೇ ಇದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಕುರಿಗಾಹಿ ಹನುಮಂತನ ಹೊಸ ವರಸೆ ನೋಡಿದ್ರಾ?: ಮಾಡೆಲ್ ಜೊತೆ ಸಿಂಗರ್ ರ‍್ಯಾಂಪ್‌ ವಾಕ್!

Related Video