ಕುರಿಗಾಹಿ ಹನುಮಂತನ ಹೊಸ ವರಸೆ ನೋಡಿದ್ರಾ?: ಮಾಡೆಲ್ ಜೊತೆ ಸಿಂಗರ್ ರ‍್ಯಾಂಪ್‌ ವಾಕ್!

ಕುರಿ ಬಾಯ್ ಹನುಮಂತ ಕೊರಿಯನ್ ಬಾಯ್ ಆಗ್ಬಿಟ್ರಾ?
ಲುಂಗಿ ಹುಡುಗ , ಗಾಯಕ ಹನುಮಂತ ಫುಲ್ ಚೇಂಜ್
ಬ್ಯಾಚುಲರ್, ಕುರಿಗಾಹಿ ಹನುಮಂತನ ಹಂಗಾಮ
 

Share this Video
  • FB
  • Linkdin
  • Whatsapp

ಹನುಮಂತನ ಹೊಸ ಇನ್ನಿಂಗ್ಸ್ ಭರ್ಜರಿಯಾಗಿದೆ. ಕುರಿಗಾಹಿ ಹನುಮಂತನ ಲುಕ್ ಫುಲ್ ಚೇಂಜ್‌ ಆಗಿದೆ. ಲುಂಗಿ ಉಟ್ಟು ಮೈಕ್ ಹಿಡಿದು ಹಾಡ್ತಿದ್ದ ಹನುಮಂತ ಈಗ ಸೂಟು ಬೂಟು ತೊಟ್ಟು ವರಸೆ ಬದಲಾಯಿಸಿಬಿಟ್ಟುದ್ದಾರೆ. ಮಾಡೆಲ್ ಜೊತೆ ಸ್ಟೈಲಿಷ್ ಹನುಮಂತು ರ್ಯಾಂಪ್ ವಾಕ್ ಮಾಡಿದ್ದಾರೆ. ಈತನದ್ದು ಒಂಥರಾ ಡಿಫರೆಂಟ್ ವ್ಯಕ್ತಿತ್ವ, ಹೀಗಾಗೆ ಈತ ಎಲ್ಲರಿಗಿಂತ ವಿಭಿನ್ನ ಅನ್ನಿಸೋದು, ತಾಂಡಾದಿಂದ ಬಂದು ಪಟ್ಟಣ ಸುತ್ತಾಡಿದ್ರೂ ಈತನ ನಡೆ ನುಡಿ ಬದಲಾಗಿಲ್ಲ. ಆದರೆ ಈಗ ಹುಡ್ಗಿಗಾಗಿ ಕೊನೆಗೂ ಬದಲಾದ ಹನುಮಂತನ ನೋಡಿ ಅವರ ಅಮ್ಮನೇ ಕಂಗಾಲಾಗಿದ್ದಾರೆ. ಇನ್ನು ಹನುಮಂತನ ಸಾಧನೆ ಬಗ್ಗೆ ಹೇಳಲೆ ಬೇಕು ಈತ ಮೂಮೂಲಿ ಹುಡ್ಗ ಅಲ್ಲವೇ ಅಲ್ಲ. ಐದನೇ ಕ್ಲಾಸ್ ಓದ್ಕೊಂಡು ಗುರುವಿಲ್ಲದೇ ಸಂಗೀತ ಕಲಿತು ಸರಿಗಮಪ ವೇದಿಕೆ ಏರಿದ. ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರ ಬಡ್ನಿ ತಾಂಡಾದ ಕುರಿಗಾಹಿ ಹನುಮಂತ. ಭರ್ತಿ 5 ವರ್ಷಗಳಿಂದ ಕರುನಾಡಿಗೆ ಪರಿಚಿತವಾಗಿರುವ ಈತ ತನ್ನದೇ ಜವಾರಿ ಸ್ಟೈಲ್ನಿಂದಲೇ ಜನಮನಗೆದ್ದ ಗಾಯಕ, ಸರಿಗಮಪ ಸೀಸನ್ 15ರ ಫಸ್ಟ್ ರನ್ನರ್ ಅಪ್. ನೇರ ಮುಗ್ದ ಮಾತು ಬಣ್ಣವಿಲ್ಲದ ಬದುಕಿನಿಂದ ಕುರಿಗಾಹಿ ಹನುಮಂತ ಎಲ್ಲರಿಗಿಂತ ಭಿನ್ನ ಸಾಲಿನಲ್ಲಿ ನಿಲ್ತಾನೆ, ವಿಭಿನ್ನ ಕಂಠದಿಂದಲೇ ಖ್ಯಾತಿಗಳಿಸಿದ ಹಳ್ಳಿ ಹೈದ ಮತ್ತೀಗ ಹೊಸ ರೂಪದಲ್ಲಿ ಕಿರುತೆರೆಗೆ ರೀ ಎಂಟ್ರಿಕೊಟ್ಟಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ನೀರಿನ ಟ್ಯಾಂಕ್‌ನಲ್ಲಿ ಸತ್ತ ಕೋತಿಗಳು..!: ಗೊತ್ತಿಲ್ಲದೇ ಅದೇ ನೀರನ್ನು ಕುಡಿದ ಗ್ರಾಮಸ್ಥರು

Related Video