Asianet Suvarna News Asianet Suvarna News

'ಕೋಲಾರ ಸ್ಪರ್ಧೆ ವಿಚಾರ ಇನ್ನೂ ಇತ್ಯರ್ಥ ಆಗಿಲ್ಲ, ಸ್ಪರ್ಧಿಸಬೇಡಿ ಅಂತ ಹೈಕಮಾಂಡ್‌ ಹೇಳಿಲ್ಲ '

ಕೋಲಾರದಿಂದ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್‌ ಹೇಳಿಲ್ಲ. ಮುಖ್ಯವಾಗಿ ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಗ್ಗೆ ಇನ್ನೂ ಯಾವುದೂ ಇತ್ಯರ್ಥ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಮಾ.21): ಕೋಲಾರದಿಂದ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್‌ ಹೇಳಿಲ್ಲ. ಮುಖ್ಯವಾಗಿ ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಗ್ಗೆ ಇನ್ನೂ ಯಾವುದೂ ಇತ್ಯರ್ಥ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಹುಲ್‌ ಗಾಂಧಿಯಾಗಲೀ, ಮಲ್ಲಿಕಾರ್ಜುನ ಖರ್ಗೆಯಾಗಲೀ ಕೋಲಾರ ಬೇಡವೆಂದು ಹೇಳಿಲ್ಲ. ಯಾವುದೇ ರಿಸ್ಕ್‌ ತೆಗೆದುಕೊಳ್ಳಬೇಡಿ. ಕ್ಷೇತ್ರದ ಆಯ್ಕೆ ನಿಮ್ಮ ತೀರ್ಮಾನವಾಗಿದೆ ಎಂದು ಹೈಕಮಾಂಡ್‌ ಹೇಳಿದೆ. ಆದರೆ, ಇಂದು ಬೆಳಗ್ಗೆ ನೂರಾರು ಅಭಿಮಾನಿಗಳು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಜಮಾಯಿಸಿ 'ರಕ್ತ ಕೊಟ್ಟೇವು ಹೊರತು ಸಿದ್ದರಾಮಯ್ಯ ಅವರನ್ನು ಬಿಡೆವು ಎಂದು ಪ್ರತಿಭಟನೆ ಆರಂಭಿಸದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಕಾರ್ಯಕ್ಕೆ ಇಡೀ ರಾಜ್ಯದಲ್ಲಿ ಓಡಾಡಬೇಕು. ಕೋಲಾರಕ್ಕೆ ಒಂದು ದಿನವೂ ಪ್ರಚಾರಕ್ಕೆ ಹೋಗಬಾರದು ಎಂದು ಹೈಕಮಾಂಡ್‌ ಹೇಳಿದೆ. ಈ ಕಾರಣಕ್ಕಾಗಿ ನಾನು ಕೋಲಾರವನ್ನು ಪೆಂಡಿಂಗ್‌ನಲ್ಲಿ ಇಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Video Top Stories