ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ದುಗೆ ಆಫರ್: ಚಾನ್ಸೇ ಇಲ್ಲ ಎಂದ ಟಗರು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಸಿದ್ದರಾಮಯ್ಯ ಸ್ಪರ್ಧೆಗೆ ಬೆಂಬಲಿಗರಿಂದ ಆಫರ್ ಮೇಲೆ ಆಫರ್ ಬರುತ್ತಿವೆ.
ಕೋಲಾರ ಕ್ಷೇತ್ರದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆಯ ಬಳಿಕವೂ, ಸಿದ್ದುಗೆ ಮತ್ತೊಂದು ಆಫರ್ ಬಂದಿದೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬನ್ನಿ ಎಂದು ಬೆಂಬಲಿಗರಿಂದ ಒತ್ತಡ ಹೇರಲಾಗಿದ್ದು, ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಸಿದ್ದುಗೆ ಒತ್ತಡ ಹಾಕಲಾಗಿದೆ. ಸುಮಾರು 50 ಜನರಿಂದ ಸಿದ್ದರಾಮ್ಯರಿಗೆ ಮನವಿ ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಲ್ಲ, ಈಗಾಗಲೇ ನಾನು ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಬೆಂಬಲಿಗರಿಗೆ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.