Asianet Suvarna News Asianet Suvarna News

ಅಂಗನವಾಡಿ ನೌಕರರಿಗೆ ಗುಡ್ ನ್ಯೂಸ್: ಗ್ರ್ಯಾಚ್ಯುಟಿ ಕೊಡಲು ಆರ್ಥಿಕ ಇಲಾಖೆ ಲಿಖಿತ ಆದೇಶ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಅವರ ಮತ್ತೊಂದು ಬೇಡಿಕೆ ಈಡೇರಿಸಿದೆ.
 

ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಗ್ರಾಚ್ಯೂಟಿ ನೀಡಲು ಒಪ್ಪಿಗೆ ಕೊಟ್ಟಿದ್ದು, ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆರ್ಥಿಕ ಇಲಾಖೆ ಗ್ರಾಚ್ಯೂಟಿ ಲಿಖಿತ ಆದೇಶ ನೀಡಿದೆ. ಗ್ರಾಚ್ಯೂಟಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಕಳೆದ 10 ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ನೀಡಬೇಕು. ಶಾಲಾ ಪೂರ್ವ ಶಿಕ್ಷಣಕ್ಕೆ ಸಮಯ ನಿಗದಿ, ಪದೋನ್ನತಿ ಕುರಿತು ಆದೇಶ ವಾಪಸ್ ಸೇರಿ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ.