Asianet Suvarna News Asianet Suvarna News

ವಿಧಾನಸಭೆ ಚುನಾವಣೆಗೆ ಸಂಸದೆ ಸುಮಲತಾ ಸ್ಪರ್ಧೆ?: ಏನಂದ್ರು ಆಪ್ತರು?

ವಿಧಾನಸಭಾ ಚುನಾವಣೆಗೆ  ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ ಫಿಕ್ಸ್‌ ಎನ್ನಲಾಗಿದ್ದು, ಆಪ್ತರ ಸಭೆ ನಡೆಸಿ ಕಣಕ್ಕಿಲಿಯಲು ಸಿದ್ಧತೆ ನಡೆಸಿದ್ದಾರೆ.

ರಾಜ್ಯ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡಲು ಸಂಸದೆ ಸುಮಲತಾ ಅಂಬರೀಶ್ ಸಜ್ಜಾಗಿದ್ದು, ಆಪ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮಂಡ್ಯ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಬೆಂಬಲಿಗರು, ಸುಮಲತಾ ಅವರ ಮುಂದಿಟ್ಟಿದ್ದಾರೆ. ಆ ಮೂರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧೆ ಖಚಿತ ಎನ್ನಲಾಗಿದೆ. ಮಂಡ್ಯ, ಮುದ್ದೂರು ಹಾಗೂ ಮೇಲುಕೋಟೆಯಲ್ಲಿ ಸ್ಪರ್ಧಿಸಲು ಒಲವು ನೀಡಲಾಗಿದ್ದು, ಮಂಡ್ಯದಿಂದ ಪ್ರತಿನಿಧಿಸಿದ್ದ ಅಂಬರೀಶ್‌ ಕ್ಷೇತ್ರವೇ ಆಯ್ಕೆ ಸಾಧ್ಯತೆ ಇದೆ.