ಅರಸೀಕೆರೆಯಲ್ಲಿ ಶುರುವಾಯ್ತು ಜೆಡಿಎಸ್ ಟಿಕೆಟ್ ಫೈಟ್: ಶಿವಲಿಂಗೇಗೌಡ ಬಗ್ಗೆ ರೇವಣ್ಣ ಫ್ಯಾಮಿಲಿ ಏನಂದ್ರು?
ಹಾಸನ ಬೆನ್ನಲ್ಲೇ ಇದೀಗ ಅರಸಿಕೆರೆಯಲ್ಲಿ ಕೂಡ ಟಿಕೆಟ್ ಗೊಂದಲ ಶುರುವಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್'ನಿಂದ ದೂರವಾಗಿರುವ ಶಾಸಕ ಶಿವಲಿಂಗೇಗೌಡ, ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಅರಸೀಕೆರೆಯಲ್ಲಿ ಹೆಚ್.ಡಿ ರೇವಣ್ಣ ಕುಟುಂಬದಿಂದ ಸಭೆ ನಡೆದಿದ್ದು, ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಮೀಟಿಂಗ್ ಮಾಡಿದ್ದಾರೆ. ಶಾಸಕ ಶಿವಲಿಂಗೇಗೌಡರು ಜೆಡಿಎಸ್ ಪಕ್ಷದಲ್ಲೇ ಇರುತ್ತಾರೆ, ಮೂರು ಬಾರಿ ಶಾಸಕರಾಗಿದ್ದಾರೆ. ಶಿವಲಿಂಗೇಗೌಡ ಎಲ್ಲೂ ಹೋಗಲ್ಲ ಎಂದು ಜೆಡಿಎಸ್ ಕಾರ್ಯಕರ್ತರಿಗೆ ರೇವಣ್ಣ ಫ್ಯಾಮಿಲಿ ಮನವರಿಕೆ ಮಾಡಿದೆ.