JP Nadda: ಬೆಳಗಾವಿಯಲ್ಲಿ ಜೆ.ಪಿ.ನಡ್ಡಾ ರೌಂಡ್ಸ್ ..! ನಡ್ಡಾ ಭೇಟಿಯ ಹಿಂದಿನ ಗೇಮ್ ಪ್ಲ್ಯಾನ್ ಏನು..?

ಬೆಳಗಾವಿಯಿಂದ ಚಿಕ್ಕೋಡಿಗೆ ತೆರಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ
ಬಿಜೆಪಿ ನಾಯಕರ ಜೊತೆಗೆ ಸಂಜೆವರೆಗೂ ನಡ್ಡಾ ಮ್ಯಾರಥಾನ್ ಮೀಟಿಂಗ್
ಜೆಡಿಎಸ್ ಜತೆ ಸೀಟು ಹಂಚಿಕೆ ಕುರಿತು ರಾಜ್ಯ ನಾಯಕರ ಜೊತೆ ಚರ್ಚೆ..?

Share this Video
  • FB
  • Linkdin
  • Whatsapp

ಚುನಾವಣೆ ಘೋಷಣೆಗೂ ಮುನ್ನವೇ ಲೋಕಸಭೆ ಅಖಾಡ ರಂಗೇರಿದೆ. ಇಂದು ಕುಂದಾನಗರಿ ಬೆಳಗಾವಿಗೆ(Belagavi) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಬರಲಿದ್ದಾರೆ. ಬೆಳಗಾವಿಯಿಂದ ಚಿಕ್ಕೋಡಿಗೆ(Chikkodi) ತೆರಳಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ. ಬಿಜೆಪಿ ನಾಯಕರ ಜೊತೆಗೆ ಸಂಜೆವರೆಗೂ ನಡ್ಡಾ ಮ್ಯಾರಥಾನ್ ಮೀಟಿಂಗ್ ನಡೆಸಲಿದ್ದಾರೆ. ಜೆಡಿಎಸ್(JDS) ಜತೆ ಸೀಟು ಹಂಚಿಕೆ ಕುರಿತು ರಾಜ್ಯ ನಾಯಕರ ಜೊತೆ ಚರ್ಚೆ ಮಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜತೆ ನಡ್ಡಾ ಮಾತುಕತೆ ನಡೆಸಲಿದ್ದಾರೆ. ಬಳಿಕ ಬೂತಮಟ್ಟದ ಕಾರ್ಯಕರ್ತರ ಸಮಾವೇಶದಲ್ಲೂ ನಡ್ಡಾ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಾಲ್ಕು ಲೋಕಸಭಾ(Loksabha) ಕ್ಷೇತ್ರಗಳ ಕೋರ್ ಕಮಿಟಿ ಸಭೆ ನಡೆಯಲಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಕ್ಷೇತ್ರಗಳಲ್ಲಿ ಸಭೆ ನಡೆಯಲಿದ್ದು, ನಾಲ್ಕು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ‌ಚರ್ಚೆಯಾಗಲಿದೆ. ರಾಜ್ಯ ಬಿಜೆಪಿ(BJP) ಟಿಕೆಟ್ ಘೋಷಣೆಗೂ ಮುನ್ನ ನಡ್ಡಾ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಬೆಳಗಾವಿಯಲ್ಲಿ ಜೆ.ಪಿ.ನಡ್ಡಾ ರೌಂಡ್ಸ್ ..! ನಡ್ಡಾ ಭೇಟಿಯ ಹಿಂದಿನ ಗೇಮ್ ಪ್ಲ್ಯಾನ್ ಏನು..?

Related Video