ಮೊದಲ ಪಟ್ಟಿ ಬಿಟ್ಟ ಬಿಜೆಪಿಯ 2ನೇ ಲಿಸ್ಟ್ ಯಾವಾಗ..? ಮಾ.8ಕ್ಕೆ ಹೊರ ಬೀಳುತ್ತಾ ಕರ್ನಾಟಕದ ಫಸ್ಟ್ ಲಿಸ್ಟ್..?

2ನೇ ಪಟ್ಟಿಯಲ್ಲಿ ಕರ್ನಾಟಕ ಬ್ಯಾಟಲ್ ಮಹಾ ರಹಸ್ಯ..!
ಮಾರ್ಚ್ 8ಕ್ಕೆ ಹೊರ ಬೀಳುತ್ತಾ ಕರ್ನಾಟಕ ಬಿಜೆಪಿ ಲಿಸ್ಟ್..?
CEC ಸಭೆಯಲ್ಲಿ ರಾಜ್ಯ ಬಿಜೆಪಿ ಟಿಕೆಟ್ ಫೈನಲ್ ಸಾಧ್ಯತೆ
 

Share this Video
  • FB
  • Linkdin
  • Whatsapp

ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ(BJP), ತನ್ನ ಎರಡನೇ ಪಟ್ಟಿಯನ್ನು ಮಾರ್ಚ್‌ 8ಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಾರ್ಚ್ 6ಕ್ಕೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ(Central Election Committee meeting) ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿಎಸ್‌ವೈ ಭಾಗಿಯಾಗಲಿದ್ದಾರೆ. ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ದಿಲ್ಲಿ ಪ್ರವಾಸ ಮಾಡಲಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕ(Karnataka) ಟಿಕೆಟ್(Ticket) ಫೈನಲ್ ಆಗುವ ಸಾಧ್ಯತೆ ಇದೆ. ಮಾರ್ಚ್ 7 ಅಥವಾ 8ಕ್ಕೆ ಕರ್ನಾಟಕ ಬಿಜೆಪಿ ಟಿಕೆಟ್ ಘೋಷಣೆಯಾಗಬಹುದು ಎನ್ನಲಾಗ್ತಿದೆ. 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 33 ಸಂಸದರಿಗೆ ಕೊಕ್ ನೀಡಲಾಗಿದೆ. ಕರ್ನಾಟಕದಲ್ಲೂ ಹಲವು ಸಂಸದರಿಗೆ ಕೊಕ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದ ಬಹುತೇಕ ಹಾಲಿ ಸಂಸದರಿಗೆ ಇದೀಗ ಢವಢವ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Pak Pro Slogan: ಪಾಕ್‌ ಪರ ಘೋಷಣೆ FSL ವರದಿಯಲ್ಲಿ ದೃಢ: ನಾಸೀರ್‌ ಹುಸೇನ್‌ ಬೆಂಬಲಿಗರ ಹೆಡೆಮುರಿ ಕಟ್ಟಿದ ಖಾಕಿ

Related Video