ಸಾಯೋರು ಎಲ್ಲಾದ್ರೂ ಸಾಯಲಿ, ಇಲ್ಲಿ ಆಸ್ಪತ್ರೆ ಮಾಡಲು ಬಿಡಲ್ಲ ಎಂದ ಬಿಜೆಪಿ ಶಾಸಕ
ಕರ್ನಾಟಕದ ಬಿಜೆಪಿಯ ಶಾಸಕರೊಬ್ಬರು ಸಾಯುವವನು ಎಲ್ಲಿ ಬೇಕಾದರೂ ಸಾಯಲಿ. ನಾನು ಇಲ್ಲಿ ಕೋವಿಡ್ ಸೆಂಟರ್ ಮಾಡಲ್ಲ ಎಂದು ಹೇಳಿದ್ದು, ಈಗ ಅದು ಫುಲ್ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ.
ಚಿತ್ರದುರ್ಗ, (ಮೇ.16): ಈ ರಾಜಕಾರಣಿಗಳಿಗೆ ಯಾವ ಸಂದರ್ಭಗಳಲ್ಲಿ ಹೇಗೆ ಮಾತನಾಡಬೇಕೋ ಅನ್ನೋ ಪರಿಜ್ಞಾನವೇ ಇರಲ್ಲ. ಬಾಯಿ ಇದೆ ಅಂತ ಮಾತಾಡ್ಬಿಡ್ತಾರೆ. ಸಾಯೋರು ಸಾಯುವವರೇ, ಪಂಪ್ ಹೊಡೆದು ಧೈರ್ಯ ತುಂಬಬೇಕಾ? ಎಂದು ಸಚಿವ ಉಮೇಶ್ ಕತ್ತಿ ಉಡಾಫೆ ಮಾತುಗಳನ್ನಾಡಿ ವಿವಾದಕ್ಕೆ ಕಾರಣರಾಗಿದ್ರು.
ಸಾಯೋರು ಸಾಯುವವರೇ, ಪಂಪ್ ಹೊಡೆದು ಧೈರ್ಯ ತುಂಬಬೇಕಾ?: ಸಚಿವ ಉಮೇಶ್ ಕತ್ತಿ
ಇದೀಗ ಮತ್ತೋರ್ವ ಬಿಜೆಪಿಯ ಶಾಸಕನೊಬ್ಬ ಸಾಯುವವನು ಎಲ್ಲಿ ಬೇಕಾದರೂ ಸಾಯಲಿ. ನಾನು ಇಲ್ಲಿ ಕೋವಿಡ್ ಸೆಂಟರ್ ಮಾಡಲ್ಲ ಎಂದು ಹೇಳಿದ್ದು, ಈಗ ಅದು ಫುಲ್ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ.