Asianet Suvarna News Asianet Suvarna News

ಮೋದಿ ರೋಡ್‌ ಶೋದಿಂದ ನಾಳೆ ನೀಟ್‌ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆ: ಕುಮಾರಸ್ವಾಮಿ

ಮೋದಿ ರೋಡ್‌ ಶೋದಿಂದ ಬಿಜೆಪಿಗೆ ಏನು ಉಪಯೋಗ ಇಲ್ಲ. ಇದರಿಂದ ನೀಟ್‌ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆ ಆಗಲಿದೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮೋದಿ ಜನರಿಗೆ ತೊಂದರೆ ಕೊಟ್ಟು ರೋಡ್‌ ಶೋ ಮಾಡುತ್ತಿದ್ದಾರೆ. ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ. ಮೋದಿ ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡುತ್ತಿದ್ದಾರೆ. ನಾಳೆ ನೀಟ್‌ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ರೋಡ್ ಶೋ ಪರಿಣಾಮ ಬೀರಲಿದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಿದ್ದಾರೆ. ಹಾಗಿದ್ರೆ ರೋಡ್‌ ಶೋ ಯಾಕೆ ಮಾಡುತ್ತಿದ್ದೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯೇ ಹೊರತು, ಬಿಜೆಪಿಗೇನು ಲಾಭವಿಲ್ಲ ಎಂದು ಹನೂರಿನಲ್ಲಿ ಹೆಚ್‌ಡಿಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.