ದಳಪತಿ ನೀಲಿ ಚಿತ್ರ ಸವಾಲು..! ಡಿಕೆ ರಾಜಕೀಯ ನಿವೃತ್ತಿಯ ಪ್ರತಿಸವಾಲು..!

‘ಕರೆಂಟ್ ಕಳ್ಳ’ ಪೋಸ್ಟರ್ ಅಭಿಮಾನಕ್ಕೆ ‘ದಳಪತಿ’ ತಳಮಳ..! 
ಸಿದ್ದು-ಡಿಕೆಶಿ ವಿರುದ್ಧವೂ ಡೈರೆಕ್ಟ್ ಅಟ್ಯಾಕ್ ಮಾಡ್ತಿರೋದೇಕೆ..?
ಸಿಎಂ, ಡಿಸಿಎಂ Vs ಕುಮಾರಸ್ವಾಮಿ..! ಮಾತಿನ ಮಲ್ಲಯುದ್ಧ..!

Share this Video
  • FB
  • Linkdin
  • Whatsapp

ದಳ ಕೋಟೆಯ ಸಾಮ್ರಾಟನಿಗೆ ಶುರುವಾಯ್ತು ತಳಮಳ ಶುರುವಾಗಿದೆ. ಕುಮಾರಸ್ವಾಮಿ(HD Kumaraswamy) ಒಬ್ಬ ಹಿಟ್ ಆ್ಯಂಡ್ ರನ್ ಕೇಸ್ ಅನ್ನೋ ಮೂಲಕ ಸಿದ್ದರಾಮಯ್ಯ ಕುಮಾರಸ್ವಾಮಿ ವಿರುದ್ಧ ವಾಗ್ಯುದ್ಧ ನಡೆಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್, ಪೋಸ್ಟರ್ ವಾರ್ ಶುರು ಮಾಡಿದೆ. ಇದೇ ಆರೋಪ ದಳಪತಿ ಸಿಟ್ಟಿಗೆ ಕಾರಣವಾಗಿದೆ. ಈಗ ಖುದ್ದು ಸಿಎಂ ಸಿದ್ದರಾಮಯ್ಯ(Siddaramaiah) ಕೂಡ, ನನ್ನ ಬಗ್ಗೆ ಮಾತಾಡೋ ನೈತಿಕತೆಯೇ ಕುಮಾರಸ್ವಾಮಿಗೆ ಇಲ್ಲ ಅಂತ ಹೇಳಿದ್ದಾರೆ. ಇದೆಲ್ಲದರ ಮಧ್ಯೆ ದಳಪತಿ ಕೋಟೆಯಲ್ಲಿನ ಶಾಸಕರೇ ಕುಮಾರಸ್ವಾಮಿಗೆ ಸಲಹೆಯನ್ನ ಕೊಟ್ಟಿದ್ದಾರೆ.ಕುಮಾರಸ್ವಾಮಿ ಅವರು ಮಾಡ್ತಿರೋ ವೈಯಕ್ತಿಕ ಆರೋಪಗಳು, ಅವರದ್ದೇ ಪಕ್ಷದಲ್ಲಿರೋ ಹಿರಿಯ ಶಾಸಕರಿಗೆ ಇಷ್ಟ ಆಗ್ತಿಲ್ಲ. ಆದ್ರಿಂದ ಕೆಲ ಹಿರಿಯ ಶಾಸಕರು ಸೇರಿಕೊಂಡು ಕುಮಾರಸ್ವಾಮಿಗೆ ಕೆಲ ಸಲಹೆಯನ್ನ ನೀಡಿದ್ದಾರೆ ಅಂತ ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಅದೃಷ್ಟದ ಮನೆಗೆ ಡಿಕೆ ಗೃಹಪ್ರವೇಶ !ಆ ಮನೆಯಲ್ಲಿ ಅಂಥದ್ದೇನಿದೆ ? ಏನದು “ಅದೃಷ್ಟ” ರಹಸ್ಯ ?

Related Video