Asianet Suvarna News Asianet Suvarna News

ಸಿದ್ದರಾಮಯ್ಯ ಅದೃಷ್ಟದ ಮನೆಗೆ ಡಿಕೆ ಗೃಹಪ್ರವೇಶ !ಆ ಮನೆಯಲ್ಲಿ ಅಂಥದ್ದೇನಿದೆ ? ಏನದು “ಅದೃಷ್ಟ” ರಹಸ್ಯ ?

ಸಿದ್ದರಾಮಯ್ಯ ಅದೃಷ್ಟದ ಮನೆಗೆ ಡಿಕೆಶಿ ಗೃಹಪ್ರವೇಶ..!
ಸಿದ್ದು ಮನೆಯನ್ನೇ ಪಟ್ಟು ಹಿಡಿದು ಪಡೆದದ್ದೇಕೆ ಡಿಕೆ..?
ಸಿದ್ದು ಹಾದಿಯಲ್ಲಿ ಡಿಕೆ, ಸಿಎಂ ಆಗ್ತಾರಾ ಕನಕಪುರ ಬಂಡೆ?
 

ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅದೃಷ್ಟದ ಮೇಲೆ ಅದೃಷ್ಟಗಳನ್ನು ಹೊತ್ತು ತಂದಿದ್ದ ಮನೆ, ಸಿದ್ದರಾಮಯ್ಯನವರ( ಅದೃಷ್ಟದ ಅರಮನೆ. ಅದೇ ಮನೆಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar). ಹರಸಾಹಸ ಪಟ್ಟರೂ ಸಿಗದ ಸಿಎಂ ಕುರ್ಚಿ ಸಿದ್ದರಾಮಯ್ಯನವರಿಗೆ(Siddaramaiah) ಸಿಕ್ಕಿದ್ದೇ ಆ ಮನೆಗೆ ಬಂದ್ಮೇಲೆ. ಅದೇ ಅರಮನೆಗೆ ಗೃಹಪ್ರವೇಶಕ್ಕೆ ಸಿದ್ಧರಾಗಿದ್ದಾರೆ ಡಿಕೆಶಿ. ಜೀವನದಲ್ಲಿ ಒಮ್ಮೆಯಾದ್ರೂ ಮುಖ್ಯಮಂತ್ರಿ ಪಟ್ಟದಲ್ಲಿ ಕೂರ್ಬೇಕು, ವಿಧಾನಸೌಧದ ಮೂರನೇ ಮಹಡಿಯಲ್ಲಿರೋ ಆ ಕುರ್ಚಿಯಲ್ಲಿ ಕೂತು ರಾಜ್ಯವಾಳ್ಬೇಕು ಅನ್ನೋದು ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಜೀವನದ ಪರಮೋಚ್ಛ ಗುರಿ. ಆ ಟಾರ್ಗೆಟ್ ರೀಚ್ ಆಗೋದಕ್ಕೆ ಡಿಕೆಶಿ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದ್ದಾರೆ. ಕಾಂಗ್ರೆಸ್ (Congress) ಸರ್ಕಾರ ಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗೇ ಆಗ್ತಾರೆ ಅಂತ ಅವ್ರ ಬೆಂಬಲಿಗ ಶಾಸಕರು ಹೇಳ್ತಿದ್ದಾರೆ. ಡಿಕೆ ಸಿಎಂ ಆಗ್ತಾರೋ ಇಲ್ವೋ ಗೊತ್ತಿಲ್ಲ.. ಆದ್ರೆ ಸಿಎಂ ಆಗಲು ಏನೆಲ್ಲಾ ಮಾಡ್ಬೇಕೋ ಅಷ್ಟನ್ನೂ ಮಾಡ್ತಿದ್ದಾರೆ. ತಂತ್ರಗಳನ್ನು ಹೆಣೆಯುತ್ತಿದ್ದಾರೆ, ರಣವ್ಯೂಹಗಳನ್ನು ರೆಡಿ ಮಾಡ್ತಿದ್ದಾರೆ. ಶಕ್ತಿ-ಸಾಮರ್ಥ್ಯಗಳ ಬಲ ಪ್ರದರ್ಶನವೂ ನಡೆಯುತ್ತಿದೆ. ಮುಖ್ಯಮಂತ್ರಿಯಾಗಲು ಇಷ್ಟೇ ಸಾಕಾ..? ಖಂಡಿತಾ ಇಲ್ಲ ವೀಕ್ಷಕರೇ.. ಇದ್ರ ಜೊತೆಗೆ ಮತ್ತೊಂದು ಅಸ್ತ್ರ ಬೇಕೇಬೇಕು... ಅದೇ ಅದೃಷ್ಟ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗ ಅದೃಷ್ಟದ ಬೆನ್ನು ಹತ್ತಿ ಹೊರಟಿದ್ದಾರೆ. 

ಇದನ್ನೂ ವೀಕ್ಷಿಸಿ: ಮನೆಗೆ ಬಂದವಳು 5 ತಿಂಗಳೂ ಇರಲಿಲ್ಲ! ಮಗಳನ್ನ ಹೊಡೆದಿದ್ದಕ್ಕೆ ಅಳಿಯನನ್ನ ಕೊಂದನಾ ತಂದೆ..?

Video Top Stories