ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

ಮೊನ್ನೆ 30 ಲಕ್ಷ.. ಇವತ್ತು 10 ಕೋಟಿ ಡೀಲ್ ಬಾಂಬ್..!
"ಟ್ರಾನ್ಸ್‌ಫರ್‌ಗೆ 10 ಕೋಟಿ.. ದಿನದ ಆದಾಯ 50 ಲಕ್ಷ"
"ಇಂಧನ" ಇಲಾಖೆಯತ್ತ ಬೆರಳು ತೋರಿಸಿದ ಹೆಚ್‌ಡಿಕೆ..!

Share this Video
  • FB
  • Linkdin
  • Whatsapp

ಕುಮಾರಸ್ವಾಮಿಯವರ ಕೈಯಲ್ಲಿರೋದು ಒಂದು ಪೆನ್'ಡ್ರೈವ್. ಹೆಚ್‌ಡಿಕೆ ಪ್ರಕಾರ ಇದು ಸಾಮಾನ್ಯ ಪೆನ್'ಡ್ರೈವ್ ಅಲ್ಲ. ಸರ್ಕಾರದಲ್ಲಿ ನಡೀತಾ ಇರೋ ವರ್ಗಾವಣೆ ದಂಧೆಯ ಸ್ಫೋಟಕ ಸಾಕ್ಷಿಯನ್ನು ತನ್ನ ಒಡಲಲ್ಲಿ ಇಟ್ಕೊಂಡಿರೋ ಪೆನ್'ಡ್ರೈವ್. ಬುಧವಾರ ವಿಧಾನಸಭಾ ಅಧಿವೇಶನಕ್ಕೆ ಬಂದವರೇ ಮಾಧ್ಯಮಗಳ ಮುಂದೆ ಬಂದ ಕುಮಾರಸ್ವಾಮಿ, ಈ ಪೆನ್'ಡ್ರೈವ್ ರಹಸ್ಯ ಸ್ಫೋಟಿಸಿದ್ರು. ಎಲ್ಲಾ ರೆಡಿ ಮಾಡಿ ಇಟ್ಕೊಂಡಿದ್ದೀನಿ ಬ್ರದರ್ ಅಂತ ಶರ್ಟ್ ಜೇಬಿನಲ್ಲಿದ್ದ ಪೆನ್'ಡ್ರೈವನ್ನು ತೆಗೆದು ತೋರಿಸಿದ್ರು. ಮಾಜಿ ಸಿಎಂ ಕುಮಾರಸ್ವಾಮಿ ತೋರಿಸ್ತಾ ಇರೋ ಈ ಪೆನ್’ಡ್ರೈವ್’ನಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ನಡೀತಾ ಇರೋ ವರ್ಗಾವಣೆ ದಂಧೆಗೆ ಸಂಬಂಧಿಸಿದ ಸಾಕ್ಷಿ ಇದ್ಯಂತೆ. ಆಡಿಯೋ ಸಾಕ್ಷಿ ಎಚ್ಡಿಕೆ ಕೈ ಸೇರಿದ್ಯಂತೆ. ನನ್ನ ಆರೋಪಗಳಿಗೆ ದಾಖಲೆ ಕೇಳ್ತಿದ್ರಲ್ಲಾ. ನೋಡಿ ಇದೇ ದಾಖಲೆ ಅಂತ ಪೆನ್'ಡ್ರೈವನ್ನು ಎಚ್ಡಿಕೆ ಪ್ರದರ್ಶಿಸಿದ್ದಾರೆ. ವರ್ಗಾವಣೆ ದಂಧೆಯ ಸಾಕ್ಷಿ ಪೆನ್'ಡ್ರೈವ್'ನಲ್ಲಿದ್ರೆ ಅದನ್ನು ಜಗಜ್ಜಾಹೀರು ಮಾಡೋದು ಎಷ್ಟು ಹೊತ್ತಿನ ಕೆಲ್ಸ..? ಆದ್ರೆ ಪೆನ್'ಡ್ರೈವ್ ತೋರಿಸಿದ ಎಚ್ಡಿಕೆ ಸಮಯ ಬಂದಾಗ ಬಹಿರಂಗ ಮಾಡೋದಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿ ..? : ಕೇಸರಿ ಹೈಕಮಾಂಡ್‌ ಜೊತೆ ಎಸ್‌ಎಡಿ ಮುಖ್ಯಸ್ಥ ಮಾತು..?

Related Video