ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿ ..? : ಕೇಸರಿ ಹೈಕಮಾಂಡ್ ಜೊತೆ ಎಸ್‌ಎಡಿ ಮುಖ್ಯಸ್ಥ ಮಾತು..?
ಚಂಡೀಗಢದಲ್ಲಿ ಕೋರ್ ಕಮಿಟಿ ಸಭೆ ನಡೆಸಿದ ಬಾದಲ್ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ನಡುವೆ ಮತ್ತೆ ಮೈತ್ರಿಯಾಗುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಎರಡು ವರ್ಷಗಳ ನಂತರ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈತ್ರಿ ಮಾತು ಕೇಳಿಬರುತ್ತಿದೆ. ಚಂಡೀಗಢದಲ್ಲಿ ಕೋರ್ ಕಮಿಟಿ ಸಭೆ ನಡೆಸಿ, ಚುನಾವಣೆ ಮತ್ತು ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗ್ತಿದೆ. ಒಂದು ಕಡೆ ವಿಪಕ್ಷಗಳು ಒಗ್ಗಟ್ಟನ್ನು ತೋರಿಸುತ್ತಿರುವ ಹಿನ್ನೆಲೆ ಬಿಜೆಪಿ ಮೈತ್ರಿಯತ್ತಾ ಮುಂದಾಗ್ತಿದೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ವಿಧಾನಸೌಧದಲ್ಲಿ ಡಿಕೆಶಿಗೆ ಮತ್ತೊಂದು ಕೊಠಡಿ !: ಏನಿದು ಡಿಸಿಎಂ ಎರೆಡೆರಡು ಕಚೇರಿ ರಹಸ್ಯ ?