ಅಕ್ಕಿ ಪಡೆಯದ ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಗಲ್ವಾ ದುಡ್ಡು?: ಹಣ ನೀಡದಂತೆ ಸರ್ಕಾರಕ್ಕೆ ಅಧಿಕಾರಿಗಳ ಸಲಹೆ !

ಬಿಪಿಎಲ್‌ ಕಾರ್ಡ್‌ ಹೊಂದಿದ್ದರೂ, ಅಕ್ಕಿಯನ್ನು ಪಡೆಯದವರಿಗೆ ಹೆಚ್ಚುವರಿ ಹಣವನ್ನು ನೀಡದಿರಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
 

Share this Video
  • FB
  • Linkdin
  • Whatsapp

ಬಿಪಿಎಲ್‌ ಕಾರ್ಡ್‌ ಇದ್ದರೂ ಅಕ್ಕಿ ಪಡೆಯದವರಿಗೆ ಹಣ ಸಿಗಲ್ವಾ ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ಯಾಕೆಂದರೆ ಸುಮಾರು 10.96 ಲಕ್ಷ ಬಿಪಿಎಲ್‌ ಕಾರ್ಡ್ ಹೊಂದಿರುವವರು ಅಕ್ಕಿಯನ್ನು ಪಡೆಯುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಆರ್ಥಿಕ ಹೊರೆಯನ್ನು ತಪ್ಪಿಸಲು ಸರ್ಕಾರ ಈ ಹಿಂದೆ ಅಕ್ಕಿ ಪಡೆಯದವರಿಗೆ ದುಡ್ಡು ನೀಡದಿರಲು ನಿರ್ಧರಿಸಿದೆ ಎನ್ನಲಾಗ್ತಿದೆ. ಕಳೆದ ತಿಂಗಳು ಅಕ್ಕಿ ಪಡೆದಿದ್ರೆ ಮಾತ್ರ ಅವರಿಗೆ ಹಣ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಹೀಗೆ ಮಾಡಿದ್ರೆ, 76 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಕೆಲವರು ಉಚಿತ ಆರೋಗ್ಯ ಸೇವೆಗಾಗಿ ಮಾತ್ರ ಬಿಪಿಎಲ್ ಕಾರ್ಡ್‌ನನ್ನು ಹೊಂದಿದ್ದಾರೆ. ಈ ರೀತಿಯ ಸಲಹೆಯನ್ನು ಅಧಿಕಾರಿಗಳು ಸರ್ಕಾರಕ್ಕೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಕ್ಷಣಾರ್ಧದಲ್ಲಿ ವಿಷ ಸರ್ಪವನ್ನು ಕಚ್ಚಿ ಕಚ್ಚಿ ತಿಂದ ಜಿಂಕೆ..!: ಇನ್ನೊಂದೆಡೆ ರಸ್ತೆ ಮೇಲೆ 2 ಆನೆಗಳ ಮಧ್ಯೆ ಭಯಂಕರ ಕಾಳಗ..!

Related Video