ಅತ್ತ ಮಂತ್ರಿಯಾಗಿ ಪ್ರಮಾಣ, ಇತ್ತ ಮಹಾಲಕ್ಷ್ಮಿಯ ಆಗಮನ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಡಬಲ್‌ ಧಮಾಕ !

ಲಕ್ಷ್ಮೀ ಹೆಬ್ಬಾಳ್ಕರ್‌ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ, ಅವರ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ. 

Share this Video
  • FB
  • Linkdin
  • Whatsapp

ಕುಂದಾನಗರಿಯ ಗಟ್ಟಿಗಿತ್ತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಒಲಿದ ಅದೃಷ್ಟ ಲಕ್ಷ್ಮೀ. ಒಂದ್ಕಡೆ ಮಂತ್ರಿಯಾಗಿ ಪ್ರಮಾಣವಚನ, ಮತ್ತೊಂದ್ಕಡೆ ಮನೆಗೆ ಮಹಾಲಕ್ಷ್ಮಿಯ ಆಗಮನ. ಒಂದೇ ದಿನ ಎರಡೆರಡು ಸಂಭ್ರಮ. ಬೆಳಗಾವಿ ಗ್ರಾಮೀಣ ಚಕ್ರವ್ಯೂಹದಲ್ಲಿ ಸಾಹುಕಾರನ ಸೇಡನ್ನು ಮೆಟ್ಟಿ ನಿಂತು ಗೆದ್ದಾಕೆ, ಈಗ ರಾಜ್ಯದ ಪ್ರಭಾವಿ ಮಿನಿಸ್ಟರ್. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಡಬಲ್ ಖುಷಿಯಲ್ಲಿದ್ದಾರೆ. ಬೆಳಗಾವಿ ಗಟ್ಟಿಗಿತ್ತಿ ಲಕ್ಷ್ಮೀ ಹೆಬ್ಬಾಳ್ಕರ್ ಸಿದ್ದರಾಮಯ್ಯ ಸರ್ಕಾರದ ಏಕೈಕ ಮಹಿಳಾ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಾಲಿಗೆ ಶನಿವಾರ ಅದೆಂಥಾ ದಿನ ಅಂದ್ರೆ, ಇದು ಅವರ ಇಡೀ ಜೀವನದಲ್ಲೇ ಯಾವತ್ತೂ ಮರೆಯಲಾಗದ ದಿನ. ಕಾರಣ ಒಂದೇ ದಿನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಜೊತೆಗೆ ಮನೆಗೆ ಭಾಗ್ಯಲಕ್ಷ್ಮೀ ಆಗಮನವಾಗಿದೆ.

ಇದನ್ನೂ ವೀಕ್ಷಿಸಿ: News Hour: ಪ್ರಮಾಣವಚನ ಸ್ವೀಕರಿಸಿದ ಸಚಿವರು, ಟ್ರಬಲ್‌ ತಂದ ಹಿರಿಯರು!

Related Video