Asianet Suvarna News Asianet Suvarna News

ವಿಡಿಯೋ ನೋಡಿ: ದಂಡನಾಯಕರಿಗೆ ಅಷ್ಟ ದಿಗ್ಬಂಧನ..ಸಿದ್ದು, ಡಿಕೆಶಿ ಕೋಟೆ ಕಂಪನ..?

ಸಹೋದರನನ್ನು ಗೆಲ್ಲಿಸಿಕೊಳ್ಳಲೇಬೇಕಾದ ಒತ್ತಡದಲ್ಲಿದ್ದಾರೆ ಡಿಕೆಶಿ..!
ಕರ್ಮಭೂಮಿಯಲ್ಲೇ ಸಿದ್ದರಾಮಯ್ಯಗೆ ಮಹಾರಾಜರ ಚಾಲೆಂಜ್..!    
ಯದುವೀರ್ ಒಡೆಯರ್ ವಿರುದ್ಧ ಸಿದ್ದು ಬತ್ತಳಿಕೆಯ ಅಸ್ತ್ರ ಯಾರು..?    

ಕಾಂಗ್ರೆಸ್ ರಣಕಲಿಗಳಾದ ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್(DK shivakumar) ದಂಡು-ದಾಳಿಗೆ, ಬಾರ್ಡರ್-ಬೌಂಡ್ರಿಗೆ ಹೆದರವರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಪ್ರಚಂಡ ಜಯಭೇರಿ ಬಾರಿಸಿತ್ತು ಅಂದ್ರೆ, ಅದ್ರ ಹಿಂದಿನ ಸೂತ್ರಧಾರರು ಇವ್ರೇ. ಇದೀಗ ಇಬ್ಬರೂ ಕದನಕಲಿಗಳು ಲೋಕಸಭಾ(Loksabha) ಅಖಾಡಕ್ಕೆ ಧುಮುಕಿದ್ದಾರೆ. ಕರ್ನಾಟಕ ಕುರುಕ್ಷೇತ್ರದ ರೀತಿಯಲ್ಲೇ ಮಹಾಭಾರತ ಯುದ್ಧವನ್ನು ಗೆಲ್ತೀವಿ ಅಂತ ಹೂಂಕರಿಸ್ತಾ ಇದ್ದಾರೆ. ರಾಜ್ಯದಲ್ಲಿ ಕನಿಷ್ಠ 20 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ ಮಾರು ಗೆಲ್ಲಲು ಹೊರಟವರಿಗೆ ಮನೆಯಲ್ಲೇ ಮಹಾ ಚಾಲೆಂಜ್ ಎದುರಾಗಿದೆ. ಯಾವ ದಾಳ ಉರುಳಿಸಿದರೆ, ಯಾವ ಸಾಮ್ರಾಜ್ಯವನ್ನು ಅಲುಗಾಡಿಸಬಹುದು ಎಂದು ಪಕ್ಕಾ ಲೆಕ್ಕಾಚಾರ ಹಾಕಿಯೇ ಉರುಳಿಸಿರುವ ದಾಳವಿದು. ಲೋಕಸಭಾ ಚುನಾವಣೆಯಲ್ಲಿ ಮಿಷನ್ 20 ಟಾರ್ಗೆಟ್ ಬೆನ್ನತ್ತಿ ಹೊರಟಿರೋ ಸಿಎಂ-ಡಿಸಿಎಂ ಜೋಡಿಯನ್ನು ಅವರ ಕರ್ಮಭೂಮಿಗಳಲ್ಲೇ ಕಟ್ಟಿ ಹಾಕಲು ಬಿಜೆಪಿ ರೋಚಕ ತಂತ್ರಗಾರಿಕೆಯನ್ನು ಹೆಣೆದು ಬಿಟ್ಟಿದೆ. ಅದು ಬರೀ ರಣತಂತ್ರವಲ್ಲ, ಸಿಎಂ-ಡಿಸಿಎಂ ಸುತ್ತ ಎದ್ದು ನಿಂತಿರೋ ಚಕ್ರವ್ಯೂಹ. ಮೊದ್ಲು ಡಿಕೆ ಶಿವಕುಮಾರ್ ವಿರುದ್ಧದ ಚಕ್ರವ್ಯೂಹದ ಕಥೆಯನ್ನು ನೋಡೋದಾದ್ರೆ.., ಇದು ಕನಕಪುರದ ಹುಲಿ ಬೇಟೆಗೆ ರೆಡಿಯಾಗಿರೋ ಅತ್ಯಂತ ರೋಚಕ ಖೆಡ್ಡಾ.

ಇದನ್ನೂ ವೀಕ್ಷಿಸಿ: Electoral Bonds: ಎಸ್‌ಬಿಐ ನೀಡಿದ ಬಾಂಡ್‌ ವಿವರ..ಚುನಾವಣಾ ಆಯೋಗ ಪ್ರಕಟ: ಹೆಚ್ಚು ದೇಣಿಗೆ ಪಡೆದ ಪಕ್ಷಗಳು ಯಾವು?

Video Top Stories