ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಆಗೋದು ಗ್ಯಾರಂಟಿ: ಭವಿಷ್ಯ ನುಡಿದ ಅರ್ಚಕ ಮಹಾದೇವಪ್ಪ ಪೂಜಾರಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ರಾಜ್ಯದ ಸಿಎಂ ಆಗೋದು ನಿಜ ಎಂದು  ಗೋನಾಲದ ಗಡೇ ದುರ್ಗಾದೇವಿಯ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ.

First Published May 19, 2023, 2:59 PM IST | Last Updated May 19, 2023, 2:59 PM IST

ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರಾಜ್ಯದ ಮುಖ್ಯಮಂತ್ರಿ ಆಗೋದು ಪಕ್ಕಾ. ಈ ಬಾರಿ ತಪ್ಪಿದ್ರೂ ಎರಡೂವರೆ ವರ್ಷದ ಬಳಿಕ ಸಿಎಂ ಆಗೇ ಆಗ್ತಾರೆ ಎಂದು ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಗೋನಾಲದ ಗಡೇ ದುರ್ಗಾದೇವಿಯ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ. ಡಿಕೆಶಿ ದುರ್ಗಾದೇವಿ ಭಕ್ತರಾಗಿದ್ದಾರೆ. ಅಲ್ಲದೇ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗೋದಕ್ಕೂ ತಾಯಿಯ ಪ್ರೇರಣೆ ಇತ್ತಂತೆ. ಈ ಹಿಂದೆ ಕೇಳಿದಾಗ ಸಿಎಂ ರೇಸ್ ನಲ್ಲಿ 9 ಜನ ಪೈಪೋಟಿಯಲ್ಲಿದ್ದಾರೆ ಎಂದು ದೇವಿ ಹೇಳಿದ್ದಳಂತೆ. ಆದ್ರೆ ಸಿಎಂ ಸ್ಥಾನ ನೀಡೋದಕ್ಕೆ ಇಬ್ಬರಿಗೆ ತಾಯಿ ಪ್ರೇರಣೆ ಆಗಿತ್ತಂತೆ. ಆದ್ರೆ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎರಡನೇ ಅವಧಿಗೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಮಹಾದೇವಪ್ಪ ಪೂಜಾರಿ ಹೇಳಿದ್ದಾರೆ. ಸಿಎಂ ಆಯ್ಕೆಯ ಕಗ್ಗಂಟಿನ ನಡುವೆಯೂ ಮಹಾದೇವಪ್ಪ ಪೂಜಾರಿ ಜೊತೆ ಡಿಕೆಶಿ ಸಂಪರ್ಕದಲ್ಲಿದ್ರಂತೆ. ತಾಯಿಯ ಆಜ್ಞೆ ಏನಿದೆ ಅನ್ನೋದನ್ನ ಮಹಾದೇವಪ್ಪ ಪೂಜಾರಿಯಿಂದ ಡಿಕೆಶಿ ತಿಳಿದುಕೊಂಡಿದ್ದರಂತೆ. 

ಇದನ್ನೂ ವೀಕ್ಷಿಸಿ: ಕಾರು ಚಾಲಕನಿಗೆ ಮಹಿಳೆಯಿಂದ ಚಪ್ಪಲಿ ಸೇವೆ: ವಿಡಿಯೋ ವೈರಲ್‌