ತಣ್ಣಗಾಗದ ಬಂಡಾಯ: ಬಿಜೆಪಿಯಲ್ಲಿ ಮತ್ತೆರಡು ವಿಕೆಟ್‌ ಪತನ

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೆ ಬಂಡಾಯ ಬಿಸಿ
ಗುಡ್‌ಬೈ ಹೇಳಿದ ವಿಜಯನಗರದ ಇಬ್ಬರು ನಾಯಕರು
ಕೋಡಿಹಳ್ಳಿ ಭೀಮಣ್ಣ, ನೇಮಿರಾಜ್‌ ನಾಯ್ಕ್‌ ಬಂಡಾಯ

First Published Apr 19, 2023, 1:29 PM IST | Last Updated Apr 19, 2023, 2:06 PM IST

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಇತ್ತಾ ಬಂಡಾಯದ ಬಿಸಿ ಸಹ ಅದಕ್ಕೆ ತಟ್ಟುತ್ತಿದೆ. ಇದು ಪಕ್ಷಕ್ಕೆ ತಲೆನೋವಾಗಿ ಸಹ ಪರಿಣಮಿಸಿದೆ. ಇದೀಗ ವಿಜಯನಗರ ಜಿಲ್ಲೆಯಲ್ಲಿ ಬಿಜೆಪಿಯ ಮತ್ತೆರಡು ವಿಕೆಟ್‌ ಪತನವಾಗಿದೆ. ಬಿಜೆಪಿ ಟಿಕೆಟ್ ಪಡೆಯಲು ಕೂಡ್ಲಿಗಿಯ ಕೋಡಿಹಳ್ಳಿ ಭೀಮಣ್ಣ ಪಯತ್ನಿಸಿದ್ರು,  ಆದ್ರೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇತ್ತಾ ಹಗರಿಬೊಮ್ಮನ ಹಳ್ಳಿಯ ಮಾಜಿ ಶಾಸಕ ನೇಮಿರಾಜ್‌ ನಾಯ್ಕ್‌ಗೆ ಸಹ ಬಿಜೆಪಿ ಟಿಕೆಟ್‌ ಕೈ ತಪ್ಪಿದೆ. ಈಗಾಗಲೇ ಅವರು ಬಂಡಾಯದ ಬಾವುಟ ಹಿಡಿದಿದ್ದು, ಸ್ಪರ್ಧೆ ಮಾಡಿ ಬಂಡಾಯ ಸಾರೋದು ಖಚಿತವಾಗಿದೆ. ಇವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ಕಾರ್ಯಕರ್ತರು ಹೈಕಮಾಂಡ್‌ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ: ತಾತನಂತೆ ಕಾನೂನು ಪದವಿ ಪಡೆದು ರಾಜಕೀಯಕ್ಕೆ ಬರುವೆ: ಧವನ್ ರಾಕೇಶ್