ತಾತನಂತೆ ಕಾನೂನು ಪದವಿ ಪಡೆದು ರಾಜಕೀಯಕ್ಕೆ ಬರುವೆ: ಧವನ್ ರಾಕೇಶ್

ಸಿದ್ದರಾಮಯ್ಯ ಮೊಮ್ಮಗ ದಿವಂಗತ ರಾಕೇಶ್  ಪುತ್ರ ಧವನ್ ತಾತನ ಜೊತೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ ಜೊತೆ ಧವನ್ ಕೂಡ ಓಡಾಟ ಆರಂಭಿಸಿದ್ದಾರೆ.

Share this Video
  • FB
  • Linkdin
  • Whatsapp

ಸಿದ್ದರಾಮಯ್ಯ ಮೊಮ್ಮಗ ದಿವಂಗತ ರಾಕೇಶ್ ಪುತ್ರ ಧವನ್ ತಾತನ ಜೊತೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾನೆ. ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ ಜೊತೆ ಧವನ್ ಕೂಡ ಓಡಾಟ ಆರಂಭಿಸಿದ್ದು, ಈ ಬಗ್ಗೆ ಸುವರ್ಣ ನ್ಯೂಸ್‌ ಜತೆ ಧವನ್ ರಾಕೇಶ್ ಮಾತನಾಡಿದ್ದು, ನನಗೆ ಮೊದಲಿನಿಂದಲೂ ರಾಜಕೀಯದಲ್ಲಿ ಆಸಕ್ತಿ ಇದೆ ತಾತನಂತೆ ಕಾನೂನು ಪದವಿ ಪಡೆದು ರಾಜಕೀಯಕ್ಕೆ ಬರುವೆ.ತಾತನ ಪರವಾಗಿ ಕ್ಯಾಂಪೇನ್‌ ಮಾಡುತ್ತೇನೆ ಎಂದು ಹೇಳಿದರು. ಇನ್ನು ವರುಣದಲ್ಲಿ ತಾತನ ಪರ ಮೊಮ್ಮಗ ಪ್ರಚಾರಕ್ಕಿಳಿಯಲಿದ್ದು ಮೊಮ್ಮಗನ ರಾಜಕೀಯ ಆಸಕ್ತಿ ಕಂಡು ತಾತ ಫುಲ್‌ ಖುಷ್‌ ಆಗಿದ್ದು,ಮೊಮ್ಮಗನ ರಾಜಕೀಯ ಆಸಕ್ತಿ ನೋಡಿ ಖುಷಿ ಆಗುತ್ತೆ ಚಾಮುಂಡೇಶ್ವರಿ, ವರುಣವನ್ನು ರಾಕೇಶ್ ನಿರ್ವಹಿಸುತ್ತಿದ್ದರು. ರಾಕೇಶ್ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ, ಅಪ್ಪನ ರಕ್ತ ಅಲ್ವ?. ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಬಂದಿದ್ದಾನೆ ಎಂದು ಅಭಿಪ್ರಾಯ ಹೇಳಿದ್ದರು. 

Related Video