ಡಿ.2ಕ್ಕೆ ದೆಹಲಿಗೆ ಆರ್.ಅಶೋಕ್, ವಿಜಯೇಂದ್ರ: ಬಹಿರಂಗ ಹೇಳಿಕೆ, ಸೀಕ್ರೆಟ್ ಸಭೆಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ಸಾಧ್ಯತೆ
ಹೈಕಮಾಂಡ್ ಭೇಟಿ ವೇಳೆ ಅಸಮಾಧಾನಿತ ನಾಯಕರ ಬಗ್ಗೆ ಚರ್ಚೆ
ಬಹಿರಂಗ ಹೇಳಿಕೆ,ಸೀಕ್ರೆಟ್ ಸಭೆಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ಸಾಧ್ಯತೆ
ಸಂಘಟನೆ ಮೇಲಾಗುವ ಪರಿಣಾಮಗಳ ಬಗ್ಗೆ ಹೈಕಮಾಂಡ್ಗೆ ಮಾಹಿತಿ
ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬಿ.ವೈ.ವಿಜಯೇಂದ್ರ(B.Y. Vijayendra) ದೆಹಲಿಗೆ ತೆರಳಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್(R. Ashok) ಜೊತೆ ಹೈಕಮಾಂಡ್ ನಾಯಕರ(High command) ಭೇಟಿ ಮಾಡಲಿದ್ದಾರೆ. ಡಿಸೆಂಬರ್ 2ಕ್ಕೆ ಅಶೋಕ್ ಮತ್ತು ವಿಜಯೇಂದ್ರ ದೆಹಲಿಗೆ ತೆರಳಲಿದ್ದಾರೆ. ಅಸಮಾಧಾನಿತರಿಗಿಂತ ಮುನ್ನ ಸಮಾಧಾನಿತರು ದೆಹಲಿಗೆ(Delhi) ಹೋಗುತ್ತಿದ್ದು, ಅಸಮಾಧಾನಿತ ಸೋಮಣ್ಣ ತಂಡಕ್ಕೂ ಮುನ್ನ ವಿಜಯೇಂದ್ರ ಹೋಗುತ್ತಿದ್ದಾರೆ. ಹುದ್ದೆ ನೀಡಿದ್ದಕ್ಕೆ ಧನ್ಯವಾದವನ್ನು ಉಭಯ ನಾಯಕರು ತಿಳಿಸಲಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಬೃಹತ್ ಸಮಾವೇಶ ಆಯೋಜನೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ಪರಿಷತ್ ವಿಪಕ್ಷ ನಾಯಕ, ಉಳಿದ ಹುದ್ದೆಗಳ ನೇಮಕ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ತಯಾರಿ, ಸಂಘಟನೆ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎನ್ನಲಾಗ್ತಿದೆ.ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಚರ್ಚಿಸಿ ರಾಜ್ಯಕ್ಕೆ ವಾಪಸ್ ಆಗುವ ಸಾಧ್ಯತೆ ಇದ್ದು, ಡಿಸೆಂಬರ್ 7ರಂದು ದೆಹಲಿಗೆ ಸೋಮಣ್ಣ, ಅರವಿಂದ್ ಬೆಲ್ಲದ್ ತೆರಳಲಿದ್ದಾರೆ. ಬಸನಗೌಡ ಯತ್ನಾಳ್, ರಮೇಶ್ ಜಾರಕಿಹೊಳಿ ಕೂಡ ದೆಹಲಿಗೆ ಹೋಗಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಹುಬ್ಬಳ್ಳಿಯಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ: ಸುವರ್ಣನ್ಯೂಸ್, ಕನ್ನಡಪ್ರಭ ಸಹಯೋಗದಲ್ಲಿ ಕಾರ್ಯಕ್ರಮ