ಹುಬ್ಬಳ್ಳಿಯಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ: ಸುವರ್ಣನ್ಯೂಸ್, ಕನ್ನಡಪ್ರಭ ಸಹಯೋಗದಲ್ಲಿ ಕಾರ್ಯಕ್ರಮ

ಮಕ್ಕಳ ದಿನಾಚರಣೆ ಪ್ರಯುಕ್ತ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಸಾವಿರಾರು ಚಿಣ್ಣರು ಕೈಯಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಅರಳಿದ್ವು. ಸ್ಪರ್ಧೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಯನ್ನೂ ನೀಡಿದ್ವು.

First Published Nov 30, 2023, 10:02 AM IST | Last Updated Nov 30, 2023, 10:02 AM IST

ಮಕ್ಕಳ ಆಟವನ್ನ ನೋಡೋಕೆ ಚೆಂದ. ಅದರಲ್ಲೂ ಪುಟ್ ಪುಟಾಣಿ ಮಕ್ಕಳ ನೃತ್ಯ, ಅವರ ಕಲೆ ನಿಜಕ್ಕೂ ಅವಿಸ್ಮರಣೀಯ..ಚಿಕ್ಕವರಿದ್ದಾಗ ಶಾಲೆಗಳಲ್ಲಿ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ, ಚಿತ್ರಕಲಾ ಸ್ಪರ್ಧೆಗಳಲ್ಲಿ(Drawing Competition) ಭಾಗವಹಿಸುವುದು ಇವೆಲ್ಲಾ ಇರುತ್ತೆ.. ಇಂಥದ್ದೇ ಒಂದು ಕಲರ್ ಫುಲ್ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ(Hubli). ಮಕ್ಕಳ ದಿನಾಚರಣೆ(childrens day) ಪ್ರಯುಕ್ತ ಕನ್ನಡಪ್ರಭ ಹಾಗೂ  ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ  ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.ಈ ಚಿತ್ರಕಲಾ ಸ್ಪರ್ಧೆಯಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ 100ಕ್ಕೂ ಅಧಿಕ  ಶಾಲೆಗಳ ಒಂದೂವರೆ ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ರು. ಕೈಯಲ್ಲಿ ಕಲರ್ ಪೆನ್ಸಿಲ್ ಹಿಡಿದು ಬಣ್ಣ ಬಣ್ಣದ ಚಿತ್ರಬಿಡಿಸಿ ಸ್ಪರ್ಧೆಗೆ ಮೆರಗು ತಂದ್ರು. 8, 9 ಹಾಗೂ 10ನೇ ತರಗತಿಯ  ಮಕ್ಕಳಿಗೆ ಚಂದ್ರಯಾನ-3, ಬರಗಾಲದ ಬವಣೆ ಹಾಗು ಸ್ವಚ್ಛ ಭಾರತ   ಹೀಗೆ ಪ್ರತ್ಯೇಕ ವಿಷಯವಸ್ತು ನೀಡಲಾಗಿತ್ತು. ಅದರ ಅನ್ವಯ ಮಕ್ಕಳು ಚಿತ್ರಬಿಡಿಸಿದ್ರು. ಅತ್ಯುತ್ತಮ ಚಿತ್ರ ಬಿಡಿಸಿದ ವಿದ್ಯಾರ್ಥಿಗಳಿಗೆ ಬೈಸಿಕಲ್, ನಗದು ಬಹುಮಾನ, ಪ್ರಶಸ್ತಿ ಫಲಕ ನೀಡಿ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಚೀಫ್ ಮೆಂಟರ್ ರವಿ ಹೆಗಡೆ ಭಾಗಿಯಾಗಿದ್ರು.. ಕಲಾ ಆಸಕ್ತಿ ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತೆ ಅಂತ ಹೇಳಿದ್ರು. ಇನ್ನೂ  ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನ ಕಂಡ ನಟಿ‌ ಅಂಕಿತಾ ಅಮರ್ ಫಿದಾ ಆದ್ರು.. ಹಾಡು ಹಾಡುತ್ತಾ, ಮಕ್ಕಳೊಂದಿಗೆ ಕುಣಿದು ಸಂಭ್ರಮಿಸಿದ್ರು.

ಇದನ್ನೂ ವೀಕ್ಷಿಸಿ:  ವರುಣನ ಮುನಿಸಿನಿಂದ ಅನ್ನದಾತರ ಬದುಕಿಗೆ ‘ಬರ’ಸಿಡಿಲು: ಉದ್ಯೋಗ ಖಾತ್ರಿ ಯೋಜನೆಯಿಂದಲೂ ಸಿಗದ ನೆರವು