Asianet Suvarna News Asianet Suvarna News

ಮೋದಿ ಗ್ಯಾರೆಂಟಿ ನಿಜವಾಗೋಕೆ ಇನ್ನೆಷ್ಟು ದಿನ ಬಾಕಿ..? ಭಾರತದ ಈ ಮಹಾಸಾಧನೆ ಹಿಂದಿರೋ ಅಸಲಿ ಕಥೆ ಏನು?

ವಿಶ್ವ ಆರ್ಥಿಕತೆ ವಿಚಾರದಲ್ಲಿ ಭಾರತದ್ದು ಮಿಂಚಿನ ವೇಗ!
ಮೋದಿ ಗ್ಯಾರೆಂಟಿ ನಿಜವಾಗೋಕೆ ಇನ್ನೆಷ್ಟು ದಿನ ಬಾಕಿ..?
ಏನು  ಗೊತ್ತಾ ಐಎಮ್ಎಫ್ ನುಡಿದ ಭಾರತದ ಭವಿಷ್ಯ..?

First Published Nov 21, 2023, 2:31 PM IST | Last Updated Nov 21, 2023, 2:30 PM IST

ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು. 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಸುತ್ತ ಹುಟ್ಟಿಕೊಂಡಿವೆ ನೂರೆಂಟು ಕಥೆಗಳು. ಭಾರತದ(India) ಬರೋಬ್ಬರಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಇದನ್ನೇ ಆಧಾರವಾಗಿಟ್ಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ, ಘಟಾನುಘಟಿ ರಾಜಕಾರಣಿಗಳು, ಬ್ಯುಸಿನೆಸ್ಮನ್‌ಗಳು  ಸಂಭ್ರಮ ಹಂಚಿಕೊಂಡಿದ್ರು. ಭಾರತದ ಈ ಬಹುದೊಡ್ಡ ಸಾಧನೆ ಬಗ್ಗೆ ಅಫಿಶಿಯಲ್‌ ಆಗಿ ಯಾವ ಮಾಹಿತಿಯು ಹೊರಬಂದಿಲ್ಲ. ಆದ್ರೆ, ಭಾರತ 4 ಟ್ರಿಲಿಯನ್ ಡಾಲರ್(4 trillion dollar) ಹೊಸ್ತಿಲಲ್ಲಿ ನಿಂತಿರೋದಂತೂ ಸತ್ಯ. ಭಾರತ ತನಗೆ ತಾನೇ ಕೊಟ್ಕೊಂಡಿರೋ 5 ಟ್ರಿಲಿಯನ್ ಡಾಲರ್ ಕನಸನ್ನ ನನಸು ಮಾಡಿಕೊಳ್ಳೋದೂ ಸತ್ಯ. 5 ಟ್ರಿಲಿಯನ್ ಡಾಲರ್, ಮೋದಿ(Narendra modi) ಎಲ್ಲೇ ಹೋದ್ರೂ, ಏನೇ ಮಾತಾಡಿ ಅಂತ ಹೇಳಿದ್ರು, ಅವರ ಮಾತಲ್ಲಿ ಇರ್ತಾ ಇದ್ದ ಒಂದು ಘೋಷಣೆ ಅಂದ್ರೆ ಇದೇ, ಭಾರತ ಇನ್ನು ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಎಕಾನಮಿ ಉಳ್ಳ ದೇಶವಾಗಲಿದೆ ಅನ್ನೋದು. ಮೋದಿ ಆಡಳಿತಾವಧಿಯಲ್ಲಿ ಭಾರತದ ಜಿಡಿಪಿಗೆ(GDP) ಮಿಂಚಿನ ವೇಗ ಬಂದಿದೆ. ಈ ಮಾತನ್ನ ವಿರೋಧಿಗಳೂ ಸಹ ತಳ್ಳಿ ಹಾಕೋಕೆ ಸಾಧ್ಚವಿಲ್ಲ. ಐಎಮ್ಎಫ್ ಲೆಕ್ಕಾಚಾರದ ಪ್ರಕಾರ, 2026-27 ಹೊತ್ತಿಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಆಗಿರಲಿದೆ.ಇದರ ಜೊತೆಗೆ, ಐಎಮ್ಎಫ್ ಪ್ರಕಾರ 2028ರ ವೇಳೆಗೆ,  ಭಾರತ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗೋದ್ರಲ್ಲಿ ಡೌಟೇ ಇಲ್ಲ.

ಇದನ್ನೂ ವೀಕ್ಷಿಸಿ:  ಮುಸ್ಲಿಂ ಸಮುದಾಯದ ಅನಾಥಾಶ್ರಮ ಮೇಲೆ ಮಕ್ಕಳ ಆಯೋಗ ದಾಳಿ: ಕರ್ನಾಟಕದಲ್ಲಿ ತಾಲಿಬಾನ್ ಮಾದರಿ ಶಿಕ್ಷಣ..?

Video Top Stories