Asianet Suvarna News Asianet Suvarna News

ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಆಗ್ತಾರಾ ಸಿ.ಪಿ.ಯೋಗೀಶ್ವರ್‌? ಸಿಪಿವೈಗೆ ಎದುರಾಳಿ ಆಗ್ತಾರಾ ಡಿಕೆಶಿ ?

ಚನ್ನಪಟ್ಟಣ ಬೈ ಎಲೆಕ್ಷನ್‌ ರಣಕಣ ಜೋರಾಗಿದ್ದು, ಸಿ.ಪಿ.ಯೋಗೀಶ್ವರ್‌ ಮೈತ್ರಿ ಪಕ್ಷದಿಂದ ನಾನೇ ಅಭ್ಯರ್ಥಿ ಎಂದಿದ್ದಾರೆ.
 

ಚನ್ನಪಟ್ಟಣ(Channapatna)ಬೈ ಎಲೆಕ್ಷನ್‌ (By-election) ರಣಕಣ ಜೋರಾಗಿದ್ದು, ಸಿ.ಪಿ.ಯೋಗೀಶ್ವರ್‌ (CP Yogeshwara) ಮೈತ್ರಿ ಪಕ್ಷದಿಂದ ನಾನೇ ಅಭ್ಯರ್ಥಿ(Candidate) ಎಂದಿದ್ದಾರೆ. ಎಚ್‌ಡಿಕೆ(HD Kumaraswamy) ನನಗೆ ಚುನಾವಣೆಗೆ ನಿಲ್ಲುವಂತೆ ಹೇಳಿದ್ದಾರೆ. ಕಳೆದ ವಾರ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಹೆಚ್‌ಡಿಕೆ ಅವರೇ ಬಂದು ಹೆಸರು ಘೋಷಿಸುವಂತೆ ಹೇಳಿದ್ದೇನೆ. ಮೈತ್ರಿ ಪಕ್ಷದ ವರಿಷ್ಠರು ಘೋಷಣೆ ಮಾಡಬೇಕು ಎಂದು ಸಿ.ಪಿ.ಯೋಗೀಶ್ವರ್‌ ಹೇಳಿದ್ದಾರೆ. ಆದಷ್ಟು ಬೇಗ ಅಭ್ಯರ್ಥಿ ಹೆಸರು ಸೂಚಿಸುವಂತೆ ಕೇಳಿದ್ದೇನೆ. ಈಗಾಗಲೇ ಕಾಂಗ್ರೆಸ್‌ನವರು(Congress) ಚುನಾವಣೆಗೆ ಸಿದ್ಧತೆ ಮಾಡುತ್ತಿದ್ದಾರೆ. ಇನ್ನೂ ಚನ್ನಪಟ್ಟಣದಲ್ಲಿ ಸಿಪಿವೈಗೆ ಡಿ.ಕೆ. ಶಿವಕುಮಾರ್‌ (DK Shivakumar) ಎದುರಾಳಿಯಾಗುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ:  ಪಿಯುಸಿಯಲ್ಲೊಂದು ಲವ್..ಡಿಗ್ರಿಯಲ್ಲಿ ಮತ್ತೊಂದು ಲವ್..!ಮನೆಯಲ್ಲಿ ಹೆಂಡತಿ ಇದ್ದರೂ, ಪ್ರೇಯಸಿ ಜೊತೆ ಸುತ್ತಾಟ..!